ಪೊನ್ನಂಪೇಟೆಯ ಶ್ರೀ ‌ರಾಮಕೃಷ್ಣ ಆಶ್ರಮಕ್ಕೆ ಎ.ಎಸ್‌ .ಪೊನ್ನಣ್ಣ ಭೇಟಿ

29/08/2020

ಗೋಣಿಕೊಪ್ಪಲು ಅ 29, : ಪೊನ್ನಂಪೇಟೆಯ ಶ್ರೀ ‌ರಾಮಕೃಷ್ಣ ಆಶ್ರಮದ ಭಾವಕ್ಯ ಮಂದಿರಕ್ಕೆ ಮಾಜಿ ಅಡಿಷನಲ್ ಅಡ್ವೊಕೇಟ್ ಜನರಲ್ ಎ.ಎಸ್‌ .ಪೊನ್ನಣ್ಣ ಭೇಟಿ ನೀಡಿದರು.
ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ‌ ಅಧ್ಯಕ್ಷ ಮತ್ತುಶ್ರೀ ರಾಮಕೃಷ್ಣ ಮಠ ಟ್ರಸ್ಟ್ ನ ಟ್ರಸ್ಟಿ  ಸ್ವಾಮಿ ಮುಕ್ತಿದಾನಂದಜೀ ಮಹರಾಜ್ ರವರನ್ನು ಈ ಸಂದರ್ಭದಲ್ಲಿ ಭೇಟಿಯಾಗಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಅವರೊಂದಿಗೆ ಅವರ ಪತ್ನಿ ಕಾಂಚನ್ ಪೊನ್ನಣ್ಣ, ಸಹೋದರ ನರೇನ್ ಕಾರ್ಯಪ್ಪ,  ಅವರ ಪತ್ನಿ   ಶ್ರೀಮತಿ ಕಾರ್ಯಪ್ಪ, ಮತ್ತು ಪ್ರವೀಣ್ ಕಾಮತ್ ಉಪಸ್ಥಿತರಿದ್ದರು. ಬಡ ಜನರ ಸೇವೆಯಲ್ಲಿ ಶ್ರೀ ರಾಮಕೃಷ್ಣ ಮಠ  ತನ್ನ ಎಲ್ಲ ಶಾಖಾ ಮಠಗಳನ್ನು ಮಾನವ ಸೇವೆಯಲ್ಲಿ ನಿಸ್ವಾರ್ಥತೆಯಿಂದ ತೊಡಗಿಸಿಕೊಂಡಿರುವುದು ಪ್ರಶಂಸನೀಯ. ವಿಶೇಷವಾಗಿ ಪೊನ್ನಂಪೇಟೆ ಆಶ್ರಮದಲ್ಲಿ 1935ರಲ್ಲಿ ಗಾಂಧೀಜಿಯವರು ಕೊಡಗಿಗೆ ಬಂದಾಗ ಉಳಿದುಕೊಂಡಿದ್ದರು ಎನ್ನುವುದು ಈ ಆಶ್ರಮದ ಪಾವಿತ್ರತೆಯನ್ನು ಸಾರುತ್ತದೆ. ಅಲ್ಲದೆ ಈ ಆಶ್ರಮದ ಹಿಂದಿನ ಅಧ್ಯಕ್ಷರಾಗಿದ್ದ ಪುರುಷೋತ್ತಮನಂದಜೀ ಮಹರಾಜ್ ರವರು ನಮ್ಮ ತಂದೆ ಎ ಕೆ ಸುಬ್ಬಯ್ಯ ರವರಿಗೆ ಆತ್ಮೀಯರಾಗಿದ್ದರು. ಪೊನ್ನಂಪೇಟೆ ಶ್ರೀ ‌ರಾಮಕೃಷ್ಣ ಆಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಜೀ ಮಹರಾಜ್ ರವರು ಕಳೆದ ಎರಡು ವರ್ಷದ ಮಳೆಯಿಂದಾದ ದುರಂತದ ಸಂದರ್ಭದಲ್ಲಿ ನಿರಾಶ್ರಿತರಿಗೆ ನೀಡಿದ ಸಹಕಾರ ಮತ್ತು ಕೋವಿಡ್ ಸಂದರ್ಭದಲ್ಲಿ ಸಹ ಅವರು ಅವಶ್ಯಕತೆ ಇರುವವರಿಗೆ ನೀಡಿದ ಸಹಕಾರ ಪ್ರಶಂಸನೀಯ ಎಂದರು. ರಾಮಕೃಷ್ಣ ಮಿಷನ್ನಿನ ಎದುರಿಸುತ್ತಿರುವ ಕಾನೂನು ಸಮಸ್ಯೆಗಳಿಗೆ ತಾನು ಸಹಕಾರ ನೀಡುವುದಾಗಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಎಂ.ಪಿ.ಕೇಶವ ಕಾಮತ್, ಚಂದನ್ ಕಾಮತ್, ಶ್ರೀನಾಥ್ ಭಟ್, ಸ್ವಾಮಿ ಪರಹಿತಾನಂದಜೀ ಮಹರಾಜ್   ಉಪಸ್ಥಿತರಿದ್ದರು.