ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿಯ ನಿವಾಸಿ ಕೋವಿಡ್ ಗೆ ಬಲಿ : ಕೊಡಗಿನಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ

30/08/2020

ಮಡಿಕೇರಿ ಆ.30 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 21ಕ್ಕೇರಿದೆ.  
ಮಡಿಕೇರಿ ನಗರದ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿಯ ನಿವಾಸಿ 64ವರ್ಷದ ಪುರುಷರೊಬ್ಬರು ಹಿಂದಿನಿಂದಲೂ ಮಧುಮೇಹ ಕಾಯಿಲೆಯಿಂದ ಮತ್ತು ಕಾಲಿನಲ್ಲಿ ಆಗಿದ್ದ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದರು. 
ದಿನಾಂಕ:28-08-2020 ರಂದು ರಾತ್ರಿ ಇವರಿಗೆ ತುಂಬಾ ಸುಸ್ತು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ದಿನಾಂಕ:29-08-2020 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬಂದಿರುತ್ತಾರೆ. ಆಗ ಇವರಿಗೆ ರಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು,  ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. 
ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಇವರಿಗೆ ಸುಸ್ತು ಮತ್ತು ಉಸಿರಾಟದ ತೊಂದರೆ ಇದ್ದ  ಕಾರಣ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಿದ್ದು, ದಿನಾಂಕ:29-08-2020 ರಂದು (ನಿನ್ನೆ) ರಾತ್ರಿ 09.05 ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿರುತ್ತಾರೆ. 
ಮೃತದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು.
ಜಿಲ್ಲಾಧಿಕಾರಿಕೊಡಗು ಜಿಲ್ಲೆ, ಮಡಿಕೇರಿ.