ಬೆಟ್ಟಗೇರಿಯಲ್ಲಿ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಪ್ರಜ್ವಲ್

30/08/2020

ಮಡಿಕೇರಿ ಆ.30 : ಬೆಟ್ಟಗೇರಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರಜ್ವಲ್ ರಕ್ಷಿಸಿದ್ದಾರೆ.
ಸ್ಥಳೀಯ ನಿವಾಸಿ ಮನು ಕಟ್ರತಂಡ ಎಂಬುವವರ ಮನೆಯ ಶೌಚಾಲಯದಲ್ಲಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಪ್ರಜ್ವಲ್ ಯಶಸ್ವಿಯಾದರು. ಗ್ರಾಮಸ್ಥರ ಸಹಕಾರದಿಂದ ಮಾಕುಟ್ಟ ಬಳಿಯ ಪೆರುಂಬಾಡಿ ಅರಣ್ಯ ಪ್ರದೇಶಕ್ಕೆ ಹಾವನ್ನು ಸ್ಥಳಾಂತರಿಸಿದರು. ಹಾವುಗಳನ್ನು ಕಂಡರೆ ತಮ್ಮ ಮೊ.ಸಂ : 9740304338 ಕ್ಕೆ ಕರೆ ಮಾಡಿದರೆ ಬಂದು ರಕ್ಷಿಸುವುದಾಗಿ ಹೇಳಿದ್ದಾರೆ.