ಕೊಡಗಿನಲ್ಲಿ ಒಂದೇ ದಿನ 48 ಮಂದಿಯಲ್ಲಿ ಸೋಂಕು : ಓರ್ವ ಸಾವು

ಮಡಿಕೇರಿ ಆ.30 : ಕೊಡಗು ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 48 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರೊಬ್ಬರು ಸಾವಿಗೀಡಾಗುವ ಮೂಲಕ ಸಾವಿನ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1427ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 1136 ಮಂದಿ ಗುಣಮುಖರಾಗಿದ್ದಾರೆ. 270 ಸಕ್ರಿಯ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 10 ಹಾಗೂ ಮಧ್ಯಾಹ್ನ 38 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಮಡಿಕೇರಿ ನಗರದ ಎಫ್‍ಎಂಸಿ ಕಾಲೇಜು ಬಳಿಯ ನಿವಾಸಿ 64 ವರ್ಷದ ಪುರುಷರೊಬ್ಬರು ಸೋಂಕಿಗೆ ಒಳಗಾಗಿ ಸಾವಿಗೀಡಾಗಿದ್ದಾರೆ.
ಭಾನುವಾರ ಬೆಳಗ್ಗೆ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 23 ವರ್ಷದ ಇಬ್ಬರು ಪುರುಷರು, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಎಫ್.ಎಂ.ಸಿ ಕಾಲೇಜು ಹಿಂಭಾಗದ 62 ವರ್ಷದ ಪುರುಷ, ನೆಲ್ಲಿಹುದಿಕೇರಿಯ ಬರಡಿ ಗ್ರಾಮದ 49 ವರ್ಷದ ಪುರುಷ, ನಾಪೋಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಬಳಿಯ 45 ವರ್ಷದ ಮಹಿಳೆ, 8 ವರ್ಷದ ಬಾಲಕ, 20 ಮತ್ತು 67 ವರ್ಷದ ಮಹಿಳೆ, ವೀರಾಜಪೇಟೆ ಚೆನ್ನಯ್ಯನಕೋಟೆಯ ಕೋಟೆ ಪೈಸಾರಿಯ 42 ವರ್ಷದ ಮಹಿಳೆ, ವೀರಾಜಪೇಟೆ ಗಾಂಧಿನಗರ ವಾಟರ್ ಟ್ಯಾಂಕ್ ಬಳಿಯ 41 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿರುವುದಾಗಿ ಅವರು ವಿವರಿಸಿದ್ದಾರೆ.
ಭಾನುವಾರ ಮಧ್ಯಾಹ್ನ 38 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಪಿರಿಯಾಪಟ್ಟಣದ ಆರನಹಳ್ಳಿಯ 28 ವರ್ಷದ ಮಹಿಳೆ, ಕೊಪ್ಪದಲ್ಲಿನ 26 ವರ್ಷದ ಪುರುಷ, ಸುಂಟಿಕೊಪ್ಪ ಶ್ರೀದೇವಿ ಲೇಔಟ್‍ನ 30 ವರ್ಷದ ಪುರುಷ, ಕುಶಾಲನಗರ ಕೂಡ್ಲೂರಿನ ಸರ್ಕಾರಿ ಶಾಲೆ ಬಳಿಯ 28 ವರ್ಷದ ಮಹಿಳೆ, ಕುಶಾಲನಗರ ರಂಗಸಮುದ್ರದ ಸರ್ಕಾರಿ ಶಾಲೆ ಬಳಿಯ 65 ವರ್ಷದ ಮಹಿಳೆ, ಕುಶಾಲನಗರ ಕೂಡಿಗೆಯ ಸೈನಿಕ ಶಾಲೆ ವಸತಿಗೃಹದ 40 ವರ್ಷದ ಮಹಿಳೆ. ಮಾದಾಪಟ್ಟಣದ ಕೆ.ಎಸ್.ಆರ್.ಟಿ.ಸಿ ಲೇಔಟ್‍ನ 26 ವರ್ಷದ ಪುರುಷ, ಗುಡ್ಡೆಹೊಸೂರುವಿನ ಮಾದಾಪಟ್ಟಣದ 55 ವರ್ಷದ ಪುರುಷ, 17 ವರ್ಷದ ಬಾಲಕ, 35, 36 ಮತ್ತು 25 ವರ್ಷದ ಮಹಿಳೆಯಲ್ಲಿ ಸೋಂಕು ಗೋಚರಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕುಶಾಲನಗರ ಕೂಡ್ಲೂರುವಿನ ಸರ್ಕಾರಿ ಶಾಲೆ ಬಳಿಯ 29 ವರ್ಷದ ಪುರುಷ, ಕೂಡುಮಂಗಳೂರುವಿನ ಡೈರಿ ಬಳಿಯ 22 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕ್‍ನ 47 ವರ್ಷದ ಮಹಿಳೆ, ಗೋಣಿಕೊಪ್ಪದ 7ನೇ ವಾರ್ಡ್‍ನ ಅಂಚೆ ಕಚೇರಿ ಎದುರಿನ 62 ವರ್ಷದ ಪುರುಷ, 58 ವರ್ಷದ ಮಹಿಳೆ, 21 ಮತ್ತು 30 ವರ್ಷದ ಪುರುಷ, ಕೈಕೇರಿಯ 39 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷ, ಗೋಣಿಕೊಪ್ಪ ಪೊನ್ನಂಪೇಟೆ ರಸ್ತೆಯ ನಿಖಿತಾ ಬೇಕರಿ ಬಳಿಯ 20 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವೀರಾಜಪೇಟೆ ಮೈತಾಡಿ ಚಾಮಿಯಾಲ ಗ್ರಾಮದ 22 ವರ್ಷದ ಪುರುಷ, 56 ವರ್ಷದ ಮಹಿಳೆ ಮತ್ತು 98 ವರ್ಷದ ಮಹಿಳೆ, ವೀರಾಜಪೇಟೆ ನೆಹರು ನಗರದ 43 ವರ್ಷದ ಪುರುಷ, ವೀರಾಜಪೇಟೆ ಬೊಯಿಕೇರಿ ಗ್ರಾಮದ 25 ವರ್ಷದ ಮಹಿಳೆ, ವೀರಾಜಪೇಟೆ ಸುಭಾಷ್ ನಗರದ 39 ವರ್ಷದ ಮಹಿಳೆ ಮತ್ತು 40 ವರ್ಷದ ಪುರುಷ, ನಾಪೋಕ್ಲುವಿನ ಸೇಕ್ರೆಡ್ ಹಾರ್ಟ್ ಶಾಲೆ ಬಳಿಯ 48 ವರ್ಷದ ಪುರುಷ, ಇಂದಿರಾ ನಗರದ 42 ವರ್ಷದ ಮಹಿಳೆ, ಭಾಗಮಂಡಲ ಪೊಲೀಸ್ ವಸತಿಗೃಹದ 27, 28 ಮತ್ತು 29 ವರ್ಷದ ಪುರುಷನಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಮಡಿಕೇರಿ ಕನ್ನಂಡಬಾಣೆಯ 39 ವರ್ಷದ ಮಹಿಳೆ, ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 39 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಕುಂಬೂರು ಅಂಚೆಯ ಬಸ್ ನಿಲ್ದಾಣ ಬಳಿಯ 23 ವರ್ಷದ ಪುರುಷನಲ್ಲೂ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.