ರಾಷ್ಟ್ರಪತಿ ಪದಕ ವಿಜೇತ ವೃತ್ತ ನಿರೀಕ್ಷಕ ದಿವಾಕರ್ ಅವರಿಗೆ ಸನ್ಮಾನ

August 30, 2020

ಮಡಿಕೇರಿ : ನಾಪೋಕ್ಲು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ವತಿಯಿಂದ ರಾಷ್ಟ್ರಪತಿ ಪದಕ ವಿಜೇತ ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್.ದಿವಾಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಾಪೋಕ್ಲುವಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮನ್ಸೂರ್ ಆಲಿ, ನಾಪೋಕ್ಲು ಠಾಣಾಧಿಕಾರಿ ಕಿರಣ್ ಅವರುಗಳು ದಿವಾಕರ್ ಅವರ ಸೇವೆಯನ್ನು ಕೊಂಡಾಡಿದರು.

error: Content is protected !!