ಕೊಡವರ ಕೋವಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ? ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದ್ದೇನೆ !

August 30, 2020

ಮಡಿಕೇರಿ ಆ.30 : ಭಾರತದ ಶಸಸ್ತ್ರ ಕಾಯ್ದೆ 1959 ರ ಸೆಕ್ಷನ್ 3 ಮತ್ತು 4 ರನ್ವಯ ಬಂದೂಕವನ್ನು ಲೈಸನ್ಸ್ಯಿಲ್ಲದೇ ಹೊಂದಲು ಕೊಡವರಿಗಿರುವ ಮತ್ತು ಜಮ್ಮಾ ಹಿಡುವಳಿದಾರರಿಗಿರುವ ವಿಶೇಷ ಹಕ್ಕನ್ನು ಕಸಿದುಕೊಳ್ಳಲು ಹೈ ಕೋರ್ಟ್ನಲ್ಲಿ ರಿಟ್ ಅರ್ಜಿ ಮೂಲಕ “ತುಕಡೆ ಗ್ಯಾಂಗ್” ಒಳಸಂಚು ರೂಪಿಸಲಾಗಿದೆ ಎಂದು ಸಿ ಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಕೊಡವರ ರಾಜ್ಯಾಂಗ ದತ್ತ ಮಾನವ ಹಕ್ಕು ಕಸಿದುಕೊಳ್ಳಲು ನಡೆಸಿದ ಪಿತೂರಿ ಬಂದೂಕವು ಕೊಡವರ ಧಾರ್ಮಿಕ ಸಂಕೇತ ಹಾಗು ಸಾಂಸ್ಕøತಿಕ ಲಾಂಛನವಾಗಿದ್ದು ಈ ಹಕ್ಕು ಅಭಾದಿತವಾಗಿ ಮುಂದುವರೆಯಬೇಕೆಂದು ಸಮರ್ಥನೀಯ ಅಂಶಗಳನ್ನು ಮುಂದಿಟ್ಟು ವರದಿ ನೀಡಿರಿ.

ಕೊಡವರ ಜನಪದೀಯ ಚರಿತ್ರೆಯ ಪ್ರಕಾರ 1) ಭೂತಾಯಿ/ತಾಯಿನೆಲ 2) ಯೋಧ ಬುಡಕಟ್ಟು ಸಂಸ್ಕಾರ ಮತ್ತು 3) ಬಂದೂಕ ಸಂಪ್ರದಾಯ ಒಂದರಿಂದ ಮತ್ತೊಂದನ್ನು ಪ್ರತ್ಯೇಕಿಸಲಾಗದಂತ ಅವಿನಾವಾಭಾವ ಸಂಬಂಧ ಹೊಂದಿದೆ. ಆದ್ದರಿಂದ ಕೊಡವರ ಜನ್ಮನೆಲಕ್ಕೆ ಸಂವಿಧಾನದಡಿಯಲ್ಲಿ ಪ್ರತ್ಯೇಕ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸಲು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸಬೇಕು ಮತ್ತು ಭಾರತದ ಶಸಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ರನ್ವಯ ಲೈಸನ್ಸ್ ಇಲ್ಲದೆ ಕೋವಿ ಹೊಂದಲಿರುವ ವಿಶೇಷ ಕಾಯ್ದೆ ನಿರಾಂತಂಕವಾಗಿ ಮುಂದುವರೆಯಬೇಕು. ಈ ಮೂರು ಅಂಶಗಳ ಸ್ಥಿರೀಕರಣಕ್ಕಾಗಿ ಸೆಪ್ಟೆಂಬರ್ 01 ರಂದು ಮಡಿಕೇರಿಯಲ್ಲಿ ಸಿ.ಎನ್.ಸಿ. ಯ 25ನೆ ವರ್ಷದ ಸಾರ್ವತ್ರಿಕ ಕೈಲ್ಪೊವ್ದ್ ನಮ್ಮೆಯನ್ನು ಆಚರಿಸಿ, ಈ ಬಾರಿ ಕೊಡವರ ಬಂದೂಕ ಹೊಂದಲಿರುವ ವಿಶೇಷ ಹಕ್ಕಿನ ಧೀಶಕ್ತಿ ದಿನವೆಂದು ಪರಿಗಣಿಸಿದ ಸಂದರ್ಭ ಸೇರಿದ್ದ ಕೊಡವ-ಕೊಡವತಿಯರು ನಿರ್ಣಯವನ್ನು ಅಂಗೀಕರಿಸಿದ್ದರು ಎಂದು ಸಿಎನ್ ಸಿ ಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. 

error: Content is protected !!