ಮಡಿಕೇರಿ ಮಹಾಬೋದಿ ಪತ್ತಿನ ಸಹಕಾರ ಸಂಘದ ಕಚೇರಿ ಸ್ಥಳಾಂತರ
30/08/2020

ಮಡಿಕೇರಿ ಆ.30 : ಮೈಸೂರು ರಸ್ತೆಯಲ್ಲಿದ್ದ ಮಡಿಕೇರಿ ಮಹಾಬೋದಿ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ತಿಳಿಸಿದ್ದಾರೆ.
ನಗರದ ರಾಜಾಸೀಟು ರಸ್ತೆಯ ಕಾಫಿ ಕೃಪಾ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿದ್ದು, ಸೆ.1 ರಂದು ಉದ್ಘಾಟನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಇನ್ನು ಮುಂದೆ ಎಲ್ಲಾ ವ್ಯವಹಾರಗಳು ಹೊಸ ಕಚೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮಹಾಬೋದಿ ಪತ್ತಿನ ಸಹಕಾರ ಸಂಘ, ಮಡಿಕೇರಿ ಮೊ.ಸಂ : 8762123191