ಬ್ರಹ್ಮಶ್ರೀ ನಾರಾಯಣ ಗುರುಗಳು

September 1, 2020

ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಸಂದೇಶವನ್ನು ಸಾರಿದ ಹತ್ತೊಂಭತ್ತನೆ ಶತಮಾನದಲ್ಲಿ ನಡೆದ ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಯಲ್ಲಿ ಕೇರಳದಲ್ಲಿ ಸಾಮಾಜಿಕ ಸುಧಾರಣೆ ಚಳುವಳಿಯ ಮುಖ್ಯ ಕಾರಣಕರ್ತರು ಶ್ರೀ ನಾರಾಯಣ ಗುರುಗಳು.
ಇವರು ಕೇರಳದ ತಿರುವನಂತಪುರ ಸಮೀಪದ ಗ್ರಾಮದಲ್ಲಿ ‘ಈಳವ’ ಜನಾಂಗದಲ್ಲಿ 1855ನೇ ಆಗಸ್ಟ್ 18ನೇ ತಾರಿಖಿನಂದು ಜನಿಸಿದರು.
ಕೇರಳ ರಾಜ್ಯದಲ್ಲಿ ಜಾತಿ ವ್ಯವಸ್ಥೆ ಬಾರಿ ಜೋರು ನಡೆಯುತ್ತಿದ್ದ ಕಾಲವದು. ಮೇಲ್ವರ್ಗದವರು-ಕೆಳವರ್ಗದವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ದೌರ್ಜನ್ಯ, ಜಾತಿ, ಭೇದ, ಶೋಷಣೆಯಿಂದ ಅಸ್ಪರ್ಷತೆಯಿಂದಾಗಿ ಕೆಳವರ್ಗದ ಜನರು ಕಂಗಲಾಗಿದರು. ಕೆಳವರ್ಗದ ಜನರು ದೇವಸ್ಥಾನಕ್ಕೆ ಹೋಗಲು ಬಿಡುತ್ತಿರಲಿಲ್ಲ. ಅಲ್ಲದೆ ದೇವಾಸ್ಥನದ ಸಮೀಪ ಕೂಡ ಹೋಗಲು ಬಿಡುತ್ತಿರಲಿಲ್ಲ. ಕೆಳ ಜಾತಿಯ ಜನರು ಮಧ್ಯಾಹ್ನದ ಹೊತ್ತಿಗೆ ಮಾತ್ರ ಹೋರಗೆ ಬರಬೇಕಿತ್ತು. ಇನ್ನು ಉಳಿದ ಸಮಯ ಹೊರಗೆ ಬಂದರೆ ಅವರ ನೆರಳು ಮೇಲ್ಜತಿಯವರಿಗೆ ಬಿದ್ದು ಮೈಲಿಗೆ ಆಗುತ್ತದೆ ಎಂದು ಭಯದಿಂದ ಮನೆಯಲ್ಲಿ ಇರುತ್ತಿದ್ದರು. ಕಾಲಿಗೆ ಚಪ್ಪಲಿ, ತಲೆಗೆ ಮುಂಡಾಸು ಕಟ್ಟಬಾರದಿತ್ತು. ಮಾತ್ರವಲ್ಲದೇ ಕೆಳವರ್ಗದ ಮಕ್ಕಳು ಸರಕಾರದ ಶಾಲೆಗೆ ಹೋಗಬಾರದು, ಸರಕಾರಿ ಕೆಲಸ ಮಾಡಬರಾರದಿತ್ತು. ಮತ್ತು ಇದಕ್ಕೆಲ್ಲ ಅವಕಾಶ ಸಿಗುತ್ತಿರಲಿಲ್ಲ. ಎಲ್ಲರಿಗೂ ಇರುವ ಸಾರ್ವಜನಿಕ ಬಾವಿ-ಕೆರೆಯಲ್ಲಿ ನೀರು ತೆಗೆಯಲು ಅವಕಾಶ ಇರುತ್ತಿರಲಿಲ್ಲ. ಕೆಳವರ್ಗದ ಹೆಣ್ಣುಮಕ್ಕಳು ತಮ್ಮ ವಸ್ತ್ರವನ್ನು ಎದೆಯ ಭಾಗದಲ್ಲಿ ಮುಚ್ಚಿಕೊಳ್ಳಬಾರದಿತ್ತು. ಒಡವೆ ಸೇರಿದಂತೆ ಅಲಾಂಕಾರಿಕ ವಸ್ತುವನ್ನು ಬಳಸಲು ಬೀಡುತ್ತಿರಲಿಲ್ಲ.
ಕೆಳವರ್ಗದವರ ನೆರಳು ಮೇಲ್ವರ್ಗದವರಿಗೆ ಬೀಳುತ್ತದೆ ಎಂದು ದೂರದಲ್ಲೇ ನಿಂತು ಮಾತನಾಡಬೇಕಿತ್ತು.
ಸ್ವಾಮಿ ವಿವೇಕಾನಂದರು ಸನ್ಯಾಸಿ ದೀಕ್ಷೆ ಪಡೆದ ನಂತರ ಇಡೀ ಭಾರತ ದೇಶವನ್ನು ಪ್ರವಾಸ ಮಾಡುತ್ತಿರುವ ಸಂದರ್ಭ ಅವರು ಕೇರಳಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಕಣ್ಣಾರೆ ಕಂಡು ಈ ನಾಡು ಒಂದು ಹುಚ್ಚಾಸ್ಪತ್ರೆ ಇದ್ದಾಂತಿದೆ ಎಂದು ಹೇಳುತ್ತಿದ್ದರು. ಈ ರೀತಿಯ ಮನಕಲಕುವ ಸನ್ನಿವೇಶ ಕೆಳವರ್ಗದ ಜನರಲ್ಲಿ ದಿನಂಪ್ರತಿ ಕಾಡುತ್ತಿತ್ತು.
ಈ ರೀತಿಯ ಶೋಚನೀಯ ಸಂದರ್ಭದಲ್ಲಿ ನಾರಾಯಣ ಗುರುಗಳು ಆಸ್ಪತ್ರೆಯ ವಿರುದ್ಧ ಹೋರಾಟ ಮಾಡಲು ಮುಂದಾದರು. ಅವರ ಹೋರಾಟ ವಿಶೀಷ್ಟ ರೀತಿಯಲ್ಲಿ ಇತ್ತು. ಸಮಾಜದಲ್ಲಿ ರಕ್ತ ಪಾತವಿಲ್ಲದೆ ಕ್ರಾಂತಿ ಮಾಡಿದವರು ಶ್ರೀ ನಾರಾಯಣ ಗುರುಗಳು.
ಮೇಲ್ವರ್ಗದವರು ನಡೆದುಕೊಳ್ಳುತ್ತಿದ್ದ ಕ್ರೂರ ಕಟ್ಟುಪಾಡಿನಿಂದ ಬೇಸತ್ತ ಅನೇಕ ಕೆಳವರ್ಗದವರು, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂದ ಗೊಳ್ಳುತ್ತಿದ್ದರು. ಆ ದರ್ಮಕ್ಕೆ ಶೋಷಣೆ ನಡೆಯುತ್ತಿರಲಿಲ್ಲ. ಶೋಷಣೆ ಯನ್ನು ತಪ್ಪಿಸಲು ಈ ರೀತಿ ಮಾಡುತ್ತಿದ್ದರು. ಇದರಿಂದ ನಾರಾಯಣ ಗುರುಗಳಿಗೆ ಕ್ರಾಂತಿಕಾರ ಹೋರಾಟ ಮಾಡಲು ಕಷ್ಟವಾಗುತ್ತಿತ್ತು.
ಆದರೆ ಶ್ರೀ ನಾರಾಯಣ ಗುರುಗಳು ಯಾವುದಕ್ಕು ದೃತಿಗೆಡದೆ ಅದರ ಉಸಬಾರಿಗೆ ಹೋಗದೆ ಮೇಲ್ವಾರ್ಗದವರು ಕಟ್ಟಿದ ಪೂಜೆ ಮಾಡುವ ದೇವಾಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದರು.
ಕೆಳವರ್ಗದವರಿಗಾಗಿಯೇ ದೇವಸ್ಥಾನ ಕಟ್ಟಲು ಮುಂದೆ ಬಂದರು. ಹಿಗೆ ಕಟ್ಟಿದ ಮೊದಲ ದೇವಾಲಯ ಕೇರಳದ ‘ಅರವಿಪುರಂ’ ಎಂಬಲ್ಲಿ 1888ನೇ ಇಸವಿಯಲ್ಲಿ ನಿರ್ಮಾಣ ಮಾಡಿದ ಮೊದಲ ದೇವಸ್ಥಾನ. ಅಲ್ಲದೇ ಹಿಂದೂ ಸಮಾಜದಲ್ಲಿ ಆ ಕಾಲದಲ್ಲಿ ಸ್ಥಾಪನೆ ಮಾಡಿದ ಆ ದೇವಸ್ಥಾನ ಸುದ್ದಿಯಾಯಿತು. ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದ ಚಿತ್ರಣವನ್ನು ಬದಲಾಗುವಂತೆ ಮಾಡಿತು.
1903ರಲ್ಲಿ ಶ್ರೀ ನಾರಾಯಣ ಗುರುಗಳು ‘ಧರ್ಮಪರಿಪಾಲನಾಯೋಗಂ’ (ಎಸ್.ಎನ್. ಡಿ.ಪಿ) ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಈಳವರ್ ಎಂಬ ಜಾತಿ ಅಲ್ಲದೆ ಇನ್ನು ಅನೇಕ ಹಿಂದುಳಿದ ಜನಾಂಗದ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಉದ್ದರಕ್ಕೆ ರಾತ್ರಿ ಹಗಲು ಕಷ್ಟಪಟ್ಟರು. ಅನೇಕ ದೇವಸ್ಥಾನ ಅಲ್ಲದೆ ಸಂಸ್ಕøತ ಶಾಲೆಯನ್ನು ಕಟ್ಟಿದರು. ಜಾತಿ, ಮತ, ಧರ್ಮ ಇಲ್ಲದೆ ಎಲ್ಲಾರಿಗೂ ಅಲ್ಲಿ ಹೋಗಲು ಅವಕಾಶ ಕಲ್ಪಿಸಿಕೊಟ್ಟರು.
ನಾರಾಯಣ ಗುರುಗಳು ಒಬ್ಬ ಸಾಮಾಜಿಕ ಸುಧಾರಕ ಮಾತ್ರವಲ್ಲದೆ ಒಬ್ಬ ಕ್ರಾಂತಿಕಾರರು ಕೂಡ ಆಗಿದ್ದರು. ಅವರು ‘ಆದರ್ಶಮಾಲ’ ಮತ್ತು ‘ಆತ್ಮೋಪದೇಶಕತರ್ಕಂ’ ಎಂಬ ಗ್ರಂಥವನ್ನು ಕ್ರಮವಾಗಿ ಸಂಸ್ಕøತ ಮತ್ತು ಮಲಯಾಳಂನಲ್ಲಿ ರಚನೆ ಮಾಡಿದರು.
ಕೆಳವರ್ಗದ ಸಮುದಾಯದ ಜಾತಿ ವ್ಯವಸ್ಥೆಯನ್ನು ಸರಿಮಾಡಲು ರಾತ್ರಿ, ಹಗಲು ದುಡಿದ ಶ್ರೀ ನಾರಾಯಣ ಗುರುಗಳು 21.09.1928 ನೇ ಇಸವಿಯಲ್ಲಿ ನಿಧನ ಹೊಂದಿದರು.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಂದೇಶವನ್ನು ಸಾರಿದ ನಾರಾಯಣ ಗುರುಗಳು ಅವರೇ ನಿರ್ಮಾಣ ಮಾಡಿದ ಗುಡಿಯಲ್ಲಿ ಬಂಧಿತರಾದರು.
ಶ್ರೀ ನಾರಾಯಣ ಗುರುಗಳು ಒಂದು ಸಮುದಾಯದ ಗುರು ಅಲ್ಲ. ಅವರು ಇಡೀ ಹಿಂದುಳಿದ ಸಮುದಾಯದ ಗುರು. ಅವರ ತತ್ವ ಎಷ್ಟು ಅನುಷ್ಠಾನ ಆಗಿದೆ? ನಾವು ಸಂಸಯದಲ್ಲಿ ನೋಡುವ ಪರಿಸ್ಥಿತಿ ಬಂದಿದೆ. ಈ ಎಲ್ಲಾ ವಿಚಾರವನ್ನು ಅವರ ಸಂದೇಶವನ್ನ ನಾವುಗಳು ಮೈಗೂಡಿಕೊಳ್ಳಬೇಕಾಗಿದೆ. ಮತ್ತು ನಮ್ಮ ಕರ್ತವ್ಯವು ಕೂಡ ಆಗಬೇಕಿದೆ.

               ಪಿ.ಎಂ. ರವಿ
               ಸದಸ್ಯರು
           ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
           ಮೊ. ಸಂಖ್ಯೆ : 9972073295 

error: Content is protected !!