ಸ್ನೇಹಧಾರ ನೂತನ ಕನ್ನಡ ಮಾಸ ಪತ್ರಿಕೆಯ ಲಾಂಛನ ಬಿಡುಗಡೆ

01/09/2020

ಮಡಿಕೇರಿ ಸೆ.1 : ಸಮಕಾಲೀನ ವಿಷಯಗಳಲ್ಲಿ ದಿಟ್ಟ ನಿಲುವುಗಳೊಂದಿಗೆ ಧಾರ್ಮಿಕ, ಶೈಕ್ಷಣಿಕ, ಕೌಟುಂಬಿಕ ವಿಷಯಗಳನ್ನೊಳಗೊಂಡು”ಸತ್ಯದೆಡೆಗೆ ದಿಟ್ಟ ಹೆಜ್ಜೆ” ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಸಿಸಿ – ಕೊಡಗು ಸಮಿತಿಯ ಸಾರಥ್ಯದಲ್ಲಿ ಹೊರ ತರಲು ಉದ್ದೇಶಿಸಿರುವ ಸ್ನೇಹಧಾರ ನೂತನ ಕನ್ನಡ ಮಾಸ ಪತ್ರಿಕೆಯ ಲಾಂಛನ ಬಿಡುಗಡೆ ಕಾರ್ಯಕ್ರಮ ಸುಂಟಿಕೊಪ್ಪ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರೀಯತ್ ಕಾಲೇಜಿನಲ್ಲಿ ನಡೆಯಿತು.
ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಉಸ್ತಾದ್ , ಹಾಗೂ ಮಾಜಿ ಶಾಸಕರಾದ ಕೆ ಎಂ ಇಬ್ರಾಹಿಂ ಮಾಸ್ಟರ್ ಜಂಟಿಯಾಗಿ ಲಾಂಛನ ಬಿಡುಗಡೆಗೊಳಿಸಿದರು. 
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ, ಕೊಡಗಿನಲ್ಲಿ ಧಾರ್ಮಿಕ, ಶೈಕ್ಷಣಿಕ ಕೌಟುಂಬಿಕ ವಿಷಯಗಳನ್ನೊಳಗೊಂಡ ನಿಯತಕಾಲಿಕ ಒಂದು ಕನಸಾಗಿತ್ತು. ಆ ಕನಸು ನನಸಾಗುವ ಕಾಲ ಕೂಡಿ ಬಂದಿದೆ.ಇಸ್ಲಾಮ್ ಧರ್ಮ ಪ್ರತಿಪಾದಿಸುವ ಶಾಂತಿಯ ಸಂದೇಶವನ್ನು ಜನರೆಡೆಗೆ  ತಲುಪಿಸುವ ಜವಾಬ್ದಾರಿ”ಸ್ನೇಹಧಾರ” ಮಾಸ ಪತ್ರಿಕೆಯ ಮೂಲಕ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ  , ಉಮರ್ ಫೈಝಿ, ಇಕ್ಬಾಲ್ ಉಸ್ತಾದ್,ಸಿ ಎಂ ಹಮೀದ್ ಉಸ್ತಾದ್, ಎಸ್ ಕೆ ಎಸ್ ಎಸ್ ಎಫ್ ಕೊಡಗು ಉಪಾಧ್ಯಕ್ಷರಾದ ಅಬ್ದುಲ್ಲ ಫ್ಲೈ ಕೂರ್ಗ್, ಕೋಶಾಧಿಕಾರಿ ಸಿದ್ದೀಕ್ ಹಾಜಿ ಕೊಡ್ಲಿಪೇಟೆ, ಜಿಲ್ಲಾ ಸಮಿತಿಯ ನೇತಾರರು, ಧಾರ್ಮಿಕ ಮುಖಂಡರುಗಳು ಹಾಗೂ ಸ್ಥಳೀಯರು ಭಾಗವಸಿದ್ದರು.ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಸಮಿತಿಯ ಪ್ರತಿನಿಧಿಗಳಾಗಿ ಕಾರ್ಯಕಾರಿ ಸಮಿತಿ ಸದಸ್ಯ ಹಮೀದ್ ಕೊಪ್ಪ ಹಾಗೂ ಜಿಸಿಸಿ ಮಾಧ್ಯಮ ವಿಭಾಗ ಸದಸ್ಯ ರಶೀದ್ ಇ .ಪಿ ವಾಲ್ನೂರ್ ತ್ಯಾಗತ್ತೂರ್ ಭಾಗವಸಿದ್ದರು.
ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ- ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ, ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ, ಮಾಧ್ಯಮ ವಿಭಾಗದ ಸಂಚಾಲಕರಾದ ಯಾಹ್ಯಾ ಕೊಡ್ಲಿಪೇಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ ಕೊಳಕೇರಿ ವಂದಿಸಿದರು.