ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ

01/09/2020

ಮಡಿಕೇರಿ ಸೆ.1 : ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಕೈಲ್ ಪೊಳ್ದ್ ಧಾರೆ ಪೂಜೆ ನೆರವೇರಿತು.
ಪ್ರತೀ ವರ್ಷ ಕೈಲ್ ಪೊಳ್ದ್ ದಿನದ ಮುಂಚಿತವಾಗಿ ಚೆಟ್ಟಳ್ಳಿ ಶ್ರೀ ಮಂಗಲ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ಧ್ ಧಾರೆ ಪೂಜೆ ನೆರವೇರಿಸಲಾಗುತಿದ್ದು, ಈ ವರ್ಷವು ದೇವಾಲಯ ತಕ್ಕರಾದ ಮುಳ್ಳಂಡ ಸೂರುಗಣಪತಿ ವರ ನೇತೃತ್ವದಲ್ಲಿ ನಡೆಯಿತು. ಊರಿನ ಹಿರಿಯರಾದ ಬಟ್ಟಿರ ಕಟ್ಟಿ ಕಾವೇರಪ್ಪ ಗ್ರಾಮಸ್ಥರ ಒಳಿತಿಗಾಗಿ ಪ್ರಾರ್ಥಿಸಿದರು.

ಪೂಜಾಕೈಂಕರ್ಯದಲ್ಲಿ ವಿಘ್ನೇಶ್ವರನಿಗೆ ಹಾಗೂ ಭಗವತಿ ದೇವಿಗೆ ಪೂಜೆ ಸಲ್ಲಿಸಿ ಅನ್ನಸಮರ್ಪಣೆಯನ್ನು ಸಲ್ಲಿಸಿದರು.