ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1489 ಕ್ಕೆ ಏರಿಕೆ

01/09/2020

ಮಡಿಕೇರಿ ಸೆ.1 : ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 25 ಹಾಗೂ ಮಧ್ಯಾಹ್ನ 6 ಮಂದಿಯಲ್ಲಿ ಸೇರಿದಂತೆ 31 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1489ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1180 ಮಂದಿ ಗುಣಮುಖರಾಗಿದ್ದಾರೆ. 288 ಸಕ್ರಿಯ ಪ್ರಕರಣಗಳಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 245ರಷ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಬೆಳಗ್ಗೆ ಮಡಿಕೇರಿಯ ಅರೆಕಾಡು ಹೊಸ್ಕೇರಿ ಗ್ರಾಮದ ಚಿಲಿಪಿಲಿ ಎಸ್ಟೇಟ್ ಬಳಿಯ 46 ಮತ್ತು 56 ವರ್ಷದ ಮಹಿಳೆ, ತಾವೂರು ಚಂದ್ರಗಿರಿ ಎಸ್ಟೇಟಿನ 29 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ ಸಮೀಪದ 46 ವರ್ಷದ ಪುರುಷ, ಮಡಿಕೇರಿ ಪಿಡಬ್ಲ್ಯೂಡಿ ವಸತಿಗೃಹದ ಮುಳಿಯ ಬಸ್ ನಿಲ್ದಾಣದ ಬಳಿಯ 33 ವರ್ಷದ ಪುರುಷನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ನಗರದ 58 ವರ್ಷದ ಪುರುಷ, ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 36 ವರ್ಷದ ಪುರುಷ, ಕುಂಜಿಲದ ಮಸೀದಿ ಬಳಿಯ 49 ವರ್ಷದ ಪುರುಷ, ಕುಶಾಲನಗರದ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಬಳಿಯ ಬಸವೇಶ್ವರ ಬಡಾವಣೆಯ 2ನೇ ಬ್ಲಾಕ್‍ನ 42 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ಮಡಿಕೇರಿ ತ್ಯಾಗರಾಜ ಕಾಲೋನಿಯ 60 ವರ್ಷದ ಪುರುಷ, 22 ವರ್ಷದ ಮಹಿಳೆ, 8 ವರ್ಷದ ಬಾಲಕ ಮತ್ತು 7 ವರ್ಷದ ಬಾಲಕಿಯಲ್ಲಿ ಸೋಂಕು ಗೋಚರಿಸಿದೆ.
ಸೋಮವಾರಪೇಟೆ ಕುಸುಬೂರು ಬೇಳೂರು ಬಾಣೆಯಲ್ಲಿನ 43 ವರ್ಷದ ಪುರುಷ ಮತ್ತು 17 ವರ್ಷದ ಬಾಲಕ, ಮಡಿಕೇರಿ ಕರ್ಣಂಗೇರಿಯ ನಿಸರ್ಗ ಬಡಾವಣೆಯ 10 ವರ್ಷದ ಬಾಲಕ, ಹೆಬ್ಬಾಲೆ ಕನಕ ಬ್ಲಾಕ್‍ನ 13 ವರ್ಷದ ಬಾಲಕ, ಪೊನ್ನಂಪೇಟೆ ಪೊಲೀಸ್ ವಸತಿಗೃಹದ 40 ವರ್ಷದ ಪುರುಷ ಮತ್ತು 6 ವರ್ಷದ ಬಾಲಕಿ, ವೀರಾಜಪೇಟೆ ಹೆಗ್ಗಳದ ಎಡಮಕ್ಕಿ ಅಯ್ಯಪ್ಪ ದೇವಾಲಯ ಬಳಿಯ 33 ವರ್ಷದ ಮಹಿಳೆ, ಗೋಣಿಕೊಪ್ಪ 1ನೇ ಬಾಕ್‍ನ 57 ವರ್ಷದ ಪುರುಷ, ಪೊನ್ನಂಪೇಟೆ ಪೊಲೀಸ್ ವಸತಿಗೃಹದ 3 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬಸವೇಶ್ವರ ಬಡಾವಣೆಯ 18 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ, ಮೈಸೂರಿನ ಬೈಲುಕುಪ್ಪ ಬಿ.ಎಂ ರಸ್ತೆಯಲ್ಲಿನ 58 ವರ್ಷದ ಪುರುಷ, ಮೇಕೇರಿ ಗೌರಿಶಂಕರ ದೇವಾಲಯ ಬಳಿಯ 50 ವರ್ಷದ ಪುರುಷ, ಮಡಿಕೇರಿ ಬಲಮುರಿಯ ಅಂಗನವಾಡಿ ಬಳಿಯ 23 ವರ್ಷದ ಮಹಿಳೆ, ಮೂರ್ನಾಡಿನ ಗಾಂಧಿನಗರದ 29 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.