ರೈತರ ಸಾಲ ಮನ್ನಾ ಯೋಜನೆಯ ಬಾಕಿ ಹಣ ಬಿಡುಗಡೆಗೆ ಒತ್ತಾಯ : ಸಹಕಾರ ಸಚಿವರಿಗೆ ಮನವಿ

01/09/2020

ಮಡಿಕೇರಿ ಸೆ.1 : ರೈತರ ಬಾಕಿ ಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಗೆ ಬಿಡುಗಡೆಗೆ ಬಾಕಿ ಇರುವ ಹಣ ಹಾಗೂ 2017ನೇ ಸಾಲಿನ ರೂ.50 ಸಾವಿರ ಸಾಲ ಮನ್ನಾದ ಹಣವನ್ನು ಬಿಡುಗಡೆ ಮಾಡುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಒತ್ತಾಯಿಸಲಾಯಿತು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ನೇತೃತ್ವದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ನಿಯೋಗ ರೈತರ ಬಾಕಿ ಸಾಲ ಮನ್ನಾ ಹಾಗೂ 2017ರ ತಲಾ 10 ಸಾವಿರ ರೂ. ಸಾಲ ಮನ್ನಾದ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಲಾಯಿತು.
ಇದೇ ಸಂದರ್ಭ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು, ಇದಕ್ಕೆ ಖಾಯಂ ಅಧಿಕಾರಿಯನ್ನು ನೇಮಿಸಬೇಕೆಂದು ಮನವಿ ಮಾಡಲಾಯಿತು.
ನಿಯೋಗದ ಮನವಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿದು ಬಂದಿದೆ. ನಿಯೋಗದಲ್ಲಿ ಬ್ಯಾಂಕ್‍ನ ಕೇಟೋಳಿರ ಹರೀಶ್ ಪೂವಯ್ಯ ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು.