ವಿರಾಜಪೇಟೆಯ ವಿವಿಧೆಡೆ ಸೆ. 2 ರಂದು ವಿದ್ಯುತ್ ವ್ಯತ್ಯಯ

01/09/2020

ಮಡಿಕೇರಿ ಸೆ. 1 : ವಿರಾಜಪೇಟೆ, ವಿದ್ಯುತ್‍ಕೇಂದ್ರದಿಂದ ಹೊರಹೋಗುವ ಸಿದ್ದಾಪುರ ವಿದ್ಯುತ್ ವಿತರಣಾಕೇಂದ್ರದಲ್ಲಿತುರ್ತು ನಿರ್ವಹಣೆಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಸೆಪ್ಟೆಂಬರ್, 02 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಗುಹ್ಯ, ಕರಡಿಗೋಡು, ಇಂಜಿಲಗೇರಿ, ಪುಲಿಯೇರಿ, ಮಲ್ದಾರೆ, ಪದಗೊಲ್ಲಿ, ಬಾಡಗ, ಬಾಣಾಂಗಾಲ, ಹುಂಡಿ, ಮೇಕೂರು ಹೊಸ್ಕೇರಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.