ವಿದ್ಯಾಗಮ ಕಾರ್ಯಕ್ರಮ : ಸಹಾಯವಾಣಿ ಪ್ರಾರಂಭ

01/09/2020

ಮಡಿಕೇರಿ ಸೆ. 1 : ವಿದ್ಯಾಗಮ ಕಾರ್ಯಕ್ರಮ ಹಾಗೂ Learning Enhancement programme ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಸಹಾಯವಾಣಿ ಪ್ರಾರಂಭ ಮಾಡಲಾಗಿರುತ್ತದೆ. ಈ ಕಾರ್ಯಕ್ರಮದ ಬಗ್ಗೆ ಶಿಕ್ಷಕರು, ಪೋಷಕರು, ಮಕ್ಕಳು ಇವರಿಗೆ ಕಾರ್ಯಕ್ರಮದ ಕುರಿತಾದ ಯಾವುದೇ ಗೊಂದಲಗಳಿಗೆ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ : 08272-228337, ತಾಲ್ಲೂಕು ಮಟ್ಟದ ಸಹಾಯವಾಣಿ ಮಡಿಕೇರಿ-08272-228133, ಸೊಮವಾರಪೇಟೆ 08276-284459, ವಿರಾಜಪೇಟೆ 08274-260808 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.