ಕಾಂಗ್ರೆಸ್ ಗೆ ಹೋಗೋಣ, ಜೆಡಿಎಸ್ ಸಭೆಗೆ ಹೋಗಬೇಡಿ ಎಂದರು : ಕೊಡಗು ಜೆಡಿಎಸ್ ಸಭೆಯಲ್ಲಿ ಮಾಜಿ ಸಚಿವರ ವಿರುದ್ಧ ಆರೋಪ

September 1, 2020

ಮಡಿಕೇರಿ ಸೆ.1 : ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕಾರಣಿ ಸಭೆ ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ತುದಿಗಾಲಲ್ಲಿ ನಿಂತಿರುವ ಹಿರಿಯರಾದ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ಜಾತ್ಯತೀತ ಜನತಾದಳದ ಸಭೆಗೆ ಹಾಜರಾಗದಂತೆ ಕೆಲವರ ಮೇಲೆ ಒತ್ತಡ ಹೇರಿದ್ದಾರೆ ಎಂದು ಕೆಲವು ಪದಾಧಿಕಾರಿಗಳು ಚರ್ಚೆಯ ಸಂದರ್ಭ ದೂರಿಕೊಂಡರು.
ಹಿರಿಯ ಮುಖಂಡರ ಇತ್ತೀಚಿನ ವರ್ತನೆ ಬೇಸರ ತಂದಿದೆ, “ನಾನು ಕಾಂಗ್ರೆಸ್ ಗೆ ಹೋಗುತ್ತಿದ್ದೇನೆ, ನೀವು ನನ್ನ ಜೊತೆ ಬನ್ನಿ, ಜೆಡಿಎಸ್ ಸಭೆಗೆ ಹೋಗಬೇಡಿ” ಎಂದು ಒತ್ತಡ ಹೇರುತ್ತಿರುವ ಬಗ್ಗೆ ಕಾರ್ಯಕರ್ತರು ಹೇಳಿಕೊಂಡಿದ್ದಾರೆÉ. ಆದರೆ ಯಾರೊಬ್ಬ ಪಕ್ಷ ನಿಷ್ಠರು ಕೂಡ ಜೆಡಿಎಸ್ ತೊರೆಯುವ ಮನಸ್ಸು ಮಾಡಿಲ್ಲ. ಇದು ಕಾರ್ಯಕರ್ತರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ ಎಂದು ಅಧ್ಯಕ್ಷರ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ಕೆ.ಎಂ.ಗಣೇಶ್ ಯಾರೇ ಆಗಿರಲಿ, ಎರಡು ದೋಣಿಗಳಲ್ಲಿ ಕಾಲಿಟ್ಟು ಪಯಣಿಸಬಾರದು, ಜೆಡಿಎಸ್ ನ್ನು ತೊರೆಯುವವರು ಶೀಘ್ರ ತೊರೆಯಲಿ ಎಂದು ಹೇಳಿದರು.
ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಳ್ಳುತ್ತಿದ್ದು, ಪಕ್ಷದ ಬಲವರ್ಧನೆಯಾಗುತ್ತಿದೆ. ತಟಸ್ಥರಾಗಿದ್ದ ಪದಾಧಿಕಾರಿಗಳು ಕೂಡ ಅತಿ ಉತ್ಸಾಹದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಉತ್ತಮ ಬೆಳವಣಿಗೆÉಯಾಗಿದೆ. ಈ ಹಿಂದೆ ಇದ್ದ ಸಕ್ರಿಯ ಪದಾಧಿಕಾರಿಗಳು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಹಿರಿಯರ ಮಾರ್ಗದರ್ಶನದಲ್ಲೇ ಮುಂದುವರಿಯುವುದಾಗಿ ಭರವಸೆ ನೀಡಿದರು.
ಪ್ರತಿ ಗ್ರಾಮ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಜೆಡಿಎಸ್ ಅತ್ಯಧಿಕ ಸ್ಥಾನಗಳನ್ನು ಗಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯ ಸಂದರ್ಭ ಕೊಡಗಿನ ಜನಸಾಮಾನ್ಯರಿಗೆ ಮಾಡಿದ ಉಪಕಾರವನ್ನು ಜನರು ಮರೆತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆ ಉತ್ತಮ ಭವಿಷ್ಯವಿದೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಯಾಲದಾಳು ಮನೋಜ್ ಬೊಪ್ಪಯ್ಯ ಅವರು ಮಾತನಾಡಿ ಒಂದು ರಾಜಕೀಯ ಪಕ್ಷಕ್ಕೆ ನಾಯಕ ಮುಖ್ಯವಲ್ಲ, ಸಿದ್ಧಾಂತ ಮುಖ್ಯ. ಆದ್ದರಿಂದ ಜೆಡಿಎಸ್ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟನಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಮುಂಬರುವ ಯಾವುದೇ ಚುನಾವಣೆಯನ್ನು ಲಘುವಾಗಿ ಕಾಣಬಾರದು. ಪ್ರತಿ ಚುನಾವಣೆಯ ಗಂಭೀಋತೆಯನ್ನು ಅರುಇತುಕೊಂಡು ಕಾಯ್ಕರ್ತರನ್ನು ಸಂಘಟಿಸಿಕೊಂಡು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬೇಕು. ಸಧ್ಯದಲ್ಲೇ ಗ್ರಾ.ಪಂ ಹಾಗೂ ಮಡಿಕೇರಿ ನಗರಸಭೆ ಚುನಾವಣೆ ಬರಲಿದ್ದು. ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕೆಂದು ಮನವಿ ಮಾಡಿದರು. ಪಕ್ಷ ನಿಷ್ಠೆಯೇ ನಮ್ಮ ಗೆಲುವಿಗೆ ಆಧಾರವಾಗಲಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ ಪಕ್ಷವನ್ನು ತಳಮಟ್ಟದಿಂದಲೇ ಬಲಗೊಳಿಸುವ ಕಾರ್ಯವಾಗಬೇಕಾಗಿದ್ದು, ಜೆಡಿಎಸ್ ಗೆ ಜಿಲ್ಲೆಯಲ್ಲಿ ಉತ್ತಮ ಭವಿಷ್ಯವಿದೆ ಎಂದರು. ಎಲ್ಲರೂ ಒಗ್ಗೂಡಿ ಮುನ್ನಡೆಯುವ ಭರವಸೆ ನೀಡಿದರು.
ಮಹಾಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ಅಲ್ಪಸಂಖ್ಯಾತರ ಅಧ್ಯಕ್ಷ ಇಸಾಕ್ ಖಾನ್ ಮತ್ತಿತರ ಪ್ರಮುಖರು ಪಕ್ಷ ಸಂಘಟನೆಯ ಕುರಿತು ಸಲಹೆಗಳನ್ನು ನೀಡಿದರು.
ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಶಿರ್, ವಿರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಹೆಚ್.ಮತೀನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್, ಜಯಮ್ಮ ಅಮ್ಮತ್ತಿ, ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾವತಿ, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಸುನಿಲ್, ಉಪಾಧ್ಯಕ್ಷ ಮೋಹನ ಮರಗೋಡು, ಮಂದಣ್ಣ, ಮಡಿಕೇರಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಶೀರ್ ಅಲಿ, ಮಜೀದ್, ಉಪಾಧ್ಯಕ್ಷ ನಝೀರ್, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಸುನಂದ, ಬೋಳಿಯಂಡ ಗಣೇಶ್, ಅಬ್ದುಲ್ಲ ಮತ್ತಿತರರು ಹಾಜರಿದ್ದರು. ಆದಿಲ್ ಪಾಷಾ ಸ್ವಾಗತಿಸಿ, ಜಾಶಿರ್ ವಂದಿಸಿದರು.
ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಇತ್ತೀಚೆಗೆ ನಿಧನರಾದ ಇಬ್ಬರು ಜೆಡಿಎಸ್ ಕಾರ್ಯಕರ್ತರಿಗೆ ಸಂತಾಪ ಸೂಚಿಸಲಾಯಿತು.

error: Content is protected !!