ಕೊಡಗಿನಲ್ಲಿ 1194 ಕೋವಿಡ್ ಸೋಂಕಿತರು ಗುಣಮುಖ

02/09/2020

ಮಡಿಕೇರಿ ಸೆ.2 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ವೇಳೆಗೆ 28 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 27 ಹೊಸ ಕೋವಿಡ್-19 ಪ್ರಕರಣಗಳು ಸೇರಿದಂತೆ ಒಟ್ಟು 55 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಟ್ಟು 1544 ಆಗಿದ್ದು, 1194 ಮಂದಿ ಗುಣಮುಖರಾಗಿದ್ದಾರೆ. 329 ಸಕ್ರಿಯ ಪ್ರಕರಣಗಳಿದ್ದು, 21 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 247 ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
::: ಗ್ರಾಮವೊಂದರಲ್ಲೇ 6 ಸೋಂಕಿತರು :::
ಮಡಿಕೇರಿ ತಾಲ್ಲೂಕಿನ ಚೆಂಬುವಿನ ಬಾಲಂಬಿ ಗ್ರಾಮವೊಂದರಲ್ಲೇ ಇಂದು ಆರು ಮಂದಿಯಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ. 59 ಮತ್ತು 32 ವರ್ಷದ ಪುರುಷರು, 52, 25, 24 ವರ್ಷದ ಮಹಿಳೆಯರು ಹಾಗೂ 15 ವರ್ಷದ ಬಾಲಕಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದ್ದು, ಮಡಿಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಂಜರಾಯಪಟ್ಟಣ ಗ್ರಾಮದ ಹೊಸಪಟ್ಟಣದ ಮುತ್ತಪ್ಪ ದೇವಾಲಯ ಬಳಿಯ 69 ವರ್ಷದ ಪುರುಷ. ಮಡಿಕೇರಿ ರಾಣಿಪೇಟೆಯ ಅಂಬೇಡ್ಕರ್ ಬಡಾವಣೆ ಸಮೀಪದ 56 ವರ್ಷದ ಪುರುಷ. ಸೋಮವಾರಪೇಟೆ ರೇಂಜರ್ ಬ್ಲಾಕಿನ 32 ವರ್ಷದ ಪುರುಷ.
ಗೋಣಿಕೊಪ್ಪ ದೇವರಪುರ ಅಂಚೆಯ ಗಣಪತಿ ದೇವಾಲಯ ಬಳಿಯ 72 ವರ್ಷದ ಪುರುಷ. ಪಾಲಿಬೆಟ್ಟದ ಮೇಕೂರು ರಸ್ತೆಯ 20 ವರ್ಷದ ಪುರುಷ, 18 ವರ್ಷದ ಮಹಿಳೆ, 50 ವರ್ಷದ 2 ಪುರುಷರು. ವಿರಾಜಪೇಟೆ ಗೋಣಿಕೊಪ್ಪದ ಎಚ್.ಸಿ ಪುರದ 75 ವರ್ಷದ ಪುರುಷ ಮತ್ತು 68 ವರ್ಷದ ಮಹಿಳೆ. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ವಸತಿಗೃಹದ 50 ವರ್ಷದ ಪುರುಷ. ಪೆÇನ್ನಂಪೇಟೆ ನಿಸರ್ಗ ನಗರದ 35 ವರ್ಷದ ಪುರುಷ. ನಾಗರಹೊಳೆಯ 30 ವರ್ಷದ ಪುರುಷ. ವಿರಾಜಪೇಟೆ ಮೊಗರ್ ಗಲ್ಲಿಯ 49 ವರ್ಷದ ಪುರುಷ. ವಿರಾಜಪೇಟೆ ಸುಭಾμï ನಗರದ 52 ವರ್ಷದ ಪುರುಷ. ವಿರಾಜಪೇಟೆ ಬೆಟ್ಟೋಳಿ ಅಂಚೆಯ ಕೊಟ್ಟೋಳಿ ಗ್ರಾಮದ 43 ವರ್ಷದ ಪುರುಷ. ವಿರಾಜಪೇಟೆ ಕಾವೇರಿ ಲೇಔಟಿನ 50 ವರ್ಷದ ಪುರುಷ. ವಿರಾಜಪೇಟೆ ಹುದಿಕೇರಿಯ ಆಸ್ಪತ್ರೆ ವಸತಿಗೃಹದ 35 ವರ್ಷದ ಮಹಿಳೆ. ವಿರಾಜಪೇಟೆ ಗಾಂಧೀನಗರದ 32 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಚೈನ್ ಗೇಟ್ ಬಳಿಯ ಪಿಡಬ್ಲ್ಯೂಡಿ ವಸತಿಗೃಹದ 32 ವರ್ಷದ ಮಹಿಳೆ, 32 ವರ್ಷದ ಪುರುಷ, 4 ವರ್ಷದ ಬಾಲಕ ಮತ್ತು 62 ವರ್ಷದ ಪುರುಷ. ಮಡಿಕೇರಿ ನಾಪೆÇೀಕ್ಲು ರಸ್ತೆಯ ಪಾಲೂರು ಗ್ರಾಮ ಮತ್ತು ಅಂಚೆಯ 55 ವರ್ಷದ ಪುರುಷ. ಸೋಮವಾರಪೇಟೆ ತಾಕೇರಿಯ ಗರ್ವಾಲೆ ರಸ್ತೆಯ 60 ವರ್ಷದ ಪುರುಷ. ಮಡಿಕೇರಿ ಭಗವತಿ ನಗರದ ಭಗವತಿ ದೇವಾಲಯ ಬಳಿಯ 38 ವರ್ಷದ ಮಹಿಳೆ. ಸೋಮವಾರಪೇಟೆ ಹೊಸಬೀಡು ಗ್ರಾಮದ ಸರ್ಕಾರಿ ಶಾಲೆ ಬಳಿಯ 4 ವರ್ಷದ ಬಾಲಕ. ಪೆÇನ್ನಂಪೇಟೆ ಕೋರ್ಟ್ ಸಮೀಪದ ನಿಸರ್ಗ ನಗರದ 27 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರದ ಕೂಡಿಗೆಯ ಸೈನಿಕ ಶಾಲೆಯ 34 ವರ್ಷದ ಪುರುಷ. ಶನಿವಾರಸಂತೆ ಮಾದ್ರೆ ಗ್ರಾಮದ 29 ವರ್ಷದ ಮಹಿಳೆ. ವಿರಾಜಪೇಟೆ ಸುಣ್ಣದ ಕಟ್ಟೆಯ 39 ವರ್ಷದ ಪುರುಷ. ಗೋಣಿಕೊಪ್ಪದ ಸೀಗೆತೋಡುವಿನ 64 ವರ್ಷದ ಮಹಿಳೆ. ಮಡಿಕೇರಿಯ ಚೆಂಬುವಿನ ಬಾಲಂಬಿ ಹೌಸ್ ಮತ್ತು ಅಂಚೆಯ 59, 32 ವರ್ಷದ ಪುರುಷರು, 52,25,24 ವರ್ಷದ ಮಹಿಳೆಯರು ಮತ್ತು 15 ವರ್ಷದ ಬಾಲಕಿ. ಮಡಿಕೇರಿ ನಾಪೆÇೀಕ್ಲು ರಸ್ತೆಯ ಪಾಲೂರು ಗ್ರಾಮದ 55 ವರ್ಷದ ಪುರುಷ. ಮಡಿಕೇರಿಯ ಗೌಡ ಸಮಾಜದ ಬಳಿಯ 90 ವರ್ಷದ ಪುರುಷ. ಸುಂಟಿಕೊಪ್ಪ 1ನೇ ಬ್ಲಾಕಿನ 45 ವರ್ಷದ ಪುರುಷ. ಮಡಿಕೇರಿ ಬೊಯಿಕೇರಿ ಬಳಿಯ ಸಿಂಕೋನ ಎಸ್ಟೇಟಿನ 24 ವರ್ಷದ ಮಹಿಳೆ.
ಮಡಿಕೇರಿ ಹಾಕತ್ತೂರಿನ 22 ವರ್ಷದ ಪುರುಷ. ಮಡಿಕೇರಿ ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಬಳಿಯ 27 ವರ್ಷದ ಮಹಿಳೆ. ಮಡಿಕೇರಿ ದೇಚೂರಿನ 46 ವರ್ಷದ ಪುರುಷ. ಮಡಿಕೇರಿ ಪ್ರಶಾಂತಿ ಹೋಂಸ್ಟೇ ಕಾಟಿಕೇರಿಯ 35 ವರ್ಷದ ಮಹಿಳೆ. ಮಡಿಕೇರಿ ಚೈನ್ ಗೇಟಿನ ಕೆ.ಎಚ್.ಡಿ ಕಾಲೋನಿ ವಸತಿಗೃಹದ 18 ವರ್ಷದ ಮಹಿಳೆ. ಮಡಿಕೇರಿ ಡೈರಿ ಫಾರಂ ಹಿಂಭಾಗದ 49 ವರ್ಷದ ಮಹಿಳೆ. ಮಡಿಕೇರಿ ಟೋಲ್ಗೇಟ್ ಬಳಿಯ 60 ವರ್ಷದ ಮಹಿಳೆ. ಮಹದೇವಪೇಟೆಯ ಅವ್ವಮ್ಮ ಕಾಂಪ್ಲೆಕ್ಸ್ ಬಳಿಯ 62 ವರ್ಷದ ಮಹಿಳೆ. ಸೋಮವಾರಪೇಟೆ ಹಳೆಕೂಡಿಗೆಯ 37 ವರ್ಷದ ಪುರುಷ. ವಿರಾಜಪೇಟೆ ಅರ್ಜಿ ಗ್ರಾಮದ ಮಸೀದಿ ಬಳಿಯ 42 ವರ್ಷದ ಪುರುಷ. ಮಡಿಕೇರಿ ಮೇಕೇರಿಯ ಟಿ.ಜಾನ್ ರೆಸಾರ್ಟಿನ 35 ಮತ್ತು 58 ವರ್ಷದ ಪುರುಷರು. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಸುಬ್ರಮಣ್ಯ ನಗರದ ಪೆÇಲೀಸ್ ವಸತಿಗೃಹದ 41 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.