ಪ್ರಣಬ್ ದಾ ಬಗ್ಗೆ ಕೊಡಗಿನ ಲೆ.ಜ. ಬಿ.ಎನ್.ಬಿ.ಎಂ. ಪ್ರಸಾದ್ ಎಸ್‍ಎಂ, ವಿಎಸ್‍ಎಂ ಹೇಳಿದ್ದು ಇಷ್ಟು

02/09/2020

ಮಡಿಕೇರಿ : (ವರದಿ ಬಿ.ಸಿ.ದಿನೇಶ್ ಕೊಡಗರಹಳ್ಳಿ) ನಾನು ಮೊದಲು ಪ್ರಣಬ್ ಮುಖರ್ಜಿಯವರನ್ನು ನೋಡಿದಾಗ ಅವರು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿಯ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಆರ್. ಗುಂಡುರಾವ್ ಅವರೊಂದಿಗೆ ಆಸೀನರಾಗಿದ್ದರು. ಪಶ್ಚಿಮಬಂಗಾಳದ ಕೃಶಶರೀರದ, ಆದರೆ ಕುಶಾಗ್ರ ಮತ್ತು ತೀಕ್ಷ್ಣ ಬುದ್ದಿ ಮತ್ತೆಯ ರಾಜಕಾರಣಿಯನ್ನು ಅವರಲ್ಲಿ ನಾನು ಕಂಡೆ. ಏಕೆಂದರೆ, ಅವರ ನೋಟ ಮತ್ತು ಲಕ್ಷಣಗಳು ಹಾಗಿದ್ದವು. ಈiಡಿsಣ Imಠಿಡಿessioಟಿ is ಣhe ಃesಣ Imಠಿಡಿessioಟಿ ಅಂತಾರಲ್ಲ, ಹಾಗೆ.
1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ ಅವರು ರಾಷ್ಟ್ರದ ಪ್ರಥಮ ಪ್ರಜೆ ಆಗುವ ತನಕ ಹಿಂತಿರುಗಿ ನೋಡಲಿಲ್ಲ. ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಅತ್ಯಂತ ನಂಬಿಕಸ್ಥ ಸಹೋದ್ಯೋಗಿ ಆಗಿದ್ದ ಪ್ರಣಬ್ ಮುಖರ್ಜಿ, ಅನೇಕ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಲ್ಲದೆ ತುರ್ತುಪರಿಸ್ಥಿಯ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಕೂಡ ವಹಿಸಿದ್ದರು. 1984 ರಲ್ಲಿ ಇಂದಿರಾಗಾಂಧಿ ಅವರು ಕೊಲೆಯಾದ ಬಳಿಕ ರಾಜೀವ್‍ಗಾಂಧಿ ಅವರು ಪ್ರಧಾನಿಯಾದರು. ಆದರೆ, ಪ್ರಧಾನಿಯಾಗುವ ಹೆಬ್ಬಯಕೆ ಹೊಂದಿದ್ದ ಪ್ರಣಬ್ ಮುಖರ್ಜಿ ಅವರು ಅಧಿಕಾರದ ಕಿತ್ತಾಟದ ಹಿನ್ನಲೆಯಲ್ಲಿ ರಾಜೀವ್‍ಗಾಂಧಿ ಅವರಿಂದ ಅವಮಾನಕರ ರೀತಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಕ್ಷದಿಂದ 1986 ರಲ್ಲಿ ಉಚ್ಛಾಟಿಸಲ್ಪಟ್ಟರು ಆದರೆ, 3 ವರ್ಷಗಳಲ್ಲಿ ಮರಳಿ ಕಾಂಗ್ರೆಸ್‍ಗೆ ಬಂದ ಪ್ರಣಬ್‍ದಾ, ರಾಜೀವ್‍ಗಾಂಧಿ, ಪಿ.ವಿ.ನರಸಿಂಹರಾವ್ ಮತ್ತು ಮನ್‍ಮೋಹನ್ ಸಿಂಗ್‍ರ ಅವಧಿಯಲ್ಲಿ ಸರ್ಕಾರ ಮತ್ತು ಪಕ್ಷದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೇ, ಪಕ್ಷದಿಂದ ದೇಶದ 13ನೇ ರಾಷ್ಟ್ರಪತಿಗಳಾಗಿ ಹೊರಹೊಮ್ಮಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈಗ ಪ್ರಣಬ್ ಮುಖರ್ಜಿ ಅವರು ಇತಿಹಾಸದ ಭಾಗವಾಗಿರುವ ಸಂದರ್ಭದಲ್ಲಿ ಈ ಮೇಲಿನವು ನನ್ನ ಮತ್ತು ಅವರ ನಂಟಿನ ಕುರಿತು ನನ್ನ ಮನಃಪಟಲದಲ್ಲಿ ಹಾದುಹೋದ ಕೆಲವು ಸಾಲುಗಳು.
ನೆನಪುಗಳನ್ನು ಮೆಲುಕು ಹಾಕುವುದಾದರೆ, ಪ್ರಣಬ್ ಮುಖರ್ಜಿ ಅವರು ರಕ್ಷಣಾ ಮಂತ್ರಿಗಳಾಗಿದ್ದಾಗ ಅವರು ಅಂಟಾಕ್ರ್ಟಿಕಾ ಖಂಡಕ್ಕೆ ಪ್ರವಾಸ ಹೋಗ ಬೇಕಾಗಿದ್ದ ಹಿನ್ನಲೆಯಲ್ಲಿ, ಅವರ ದೈಹಿಕಕ್ಷಮತೆಯನ್ನು ಪರೀಕ್ಷಿಸಬೇಕಾದ ಜವಾಬ್ದಾರಿ ನನ್ನದಾಗಿತ್ತು. ಅವರ ದೆಹಲಿಯ ಟೆಲ್‍ಕೋಟಾರ ನಿವಾಸಕ್ಕೆ ಹೋದಾಗ ಅತ್ಯುತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ಬಂಗಲೆಯನ್ನು ನೋಡಿ, ಪ್ರಣಬ್ ಮುಖರ್ಜಿ ಅವರ ವ್ಯಕ್ತಿತ್ವಕ್ಕೆ ಸರಿ ಹೊಂದುವ ಮನೆಯೇ ಅವರಿಗೆ ಸಿಕ್ಕಿದ್ದು ನನ್ನ ಅಚ್ಚರಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ 13ನ್ನು ನತದೃಷ್ಟ ಸಂಖ್ಯೆ ಎಂದು ಹೇಳಲಾಗುತ್ತದೆ. ಈ ಮನೆಯ ಸಂಖ್ಯೆ 13 ಆಗಿದ್ದರೂ ಸಹ, ಪ್ರಣಬ್ ಮುಖರ್ಜಿ ಅವರು ದೇಶದ ಹದಿಮೂರನೇ ರಾಷ್ಟ್ರಪತಿಗಳಾಹಿ ಹೊರಹೊಮ್ಮಿದ್ದು ಒಂದು ಯೋಗಾಯೋಗಾ.
ನಾನು ಅವರ ಮನೆಗೆ ಬೆಳಿಗ್ಗಿನ 8 ಗಂಟೆ ಸುಮಾರಿಗೆ ಹೋದಾಗ ನನ್ನನ್ನು ಅತ್ಯಂತ ಸೌಹಾರ್ದಯುತ ವಾತವರಣದಲ್ಲಿ ಸ್ವಾಗತಿಸಿ ಸತ್ಕರಿಸಿದ ಹಿನ್ನಲೆಯಲ್ಲಿ, ನಾನು ಅತ್ಯಂತ ಸುಲಭವಾಗಿ ಮತ್ತು ಯಾವುದೇ ಅಳುಕಿಲ್ಲz, ಅವರ ಪೂರ್ಣ ಆರೋಗ್ಯ ತಪಾಸಣೆಯ ಇತಿಹಾಸವನ್ನು ತಿಳಿದುಕೊಂಡು ಮುಂದುವರೆಯಲು ಸಾಧ್ಯವಾಯಿತು. ಸಾಕಷ್ಟು ದೈಹಿಕ ತೊಂದರೆಗಳ ನಡುವೆಯೂ ಅವರು ದಿನನಿತ್ಯ 18 ಗಂಟೆಗಳ ಕೆಲಸ ಮಾಡುತ್ತಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿತ್ತು. ಪ್ರಣಬ್ ಮುಖರ್ಜಿ ಅವರು ದೇಶದ ರಕ್ಷಣಾ ಮಂತ್ರಿ ಆಗಿದ್ದರೂ ಸಹ ಪಕ್ಷದ ಮತ್ತು ಸರ್ಕಾರದ ರಕ್ಷಣೆಯ ಮುಂಚೂಣಿಯಲ್ಲಿದ್ದು ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಟ್ರಬಲ್‍ಶೂಟರ್ ಆಗಿದ್ದರು. ಅವರು ಅತ್ಯಂತ ದೈವ ಭಕ್ತಿಯ, ಶಿಸ್ತು ಮೇಳೈಸಿದ ಜೀವನವನ್ನು ನಡೆಸಿದ ಹಿನ್ನಲೆಯಲ್ಲಿ ದೈಹಿಕ ತೊಂದರೆಗಳನ್ನು ಮೆಟ್ಟಿ ನಿಲ್ಲಲು sಸಾಧ್ಯವಾಯಿತು ಎಂದು ನಾನು ನಂಬಿದ್ದೇನೆ. ಈ ಕಾರಣದಿಂದಲೇ ಅವರು ಅತ್ಯಂತ ಯಶಸ್ವಿಯಾಗಿ ಅಂಟಾಕ್ರ್ಟಿಕ ಪ್ರವಾಸವನ್ನು ಮಾಡಿ ಬರಲು ಸಾಧ್ಯವಾಯಿತು ಎಂಬುದನ್ನು ನಾನು ಇಲ್ಲಿ ಉಲ್ಲೇಖಿಸ ಭಯಸುತ್ತೇನೆ.
ಮುಂದೆ 2016 ರಲ್ಲಿ ನಾನು ರಾಷ್ರ್ಟಪರಿಗಳ ಫಿಜಿಶಿಯನ್ ಮತ್ತು ಗೌರವ ಸರ್ಜನ್ ಆಗಿದ್ದ ಹಿನ್ನೆಲೆಯಲ್ಲಿ ಅವರನ್ನು ಅನೇಕ ಭಾರಿ ಅವರ ಗೌರವ ಫಿಜಿಶಿಯನ್ ಮತ್ತು ಸರ್ಜನ್ ಆಗಿ ಭೇಟಿ ಮಾಡಿದ್ದರು. ಅವರನ್ನು ಭೇಟಿ ಮಾಡಿದ್ದೇನೆ. ಅವರ ಬಗ್ಗೆ ನನ್ನ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತಲೆ ಹೋಯಿತು. ಏಕೆಂದರೆ ಪ್ರಣಬ್ ಮುಖರ್ಜಿ ಅವರ ವ್ಯಕ್ತಿತ್ವದ ವರ್ಚಸ್ಸು ಪ್ರಭಾವ ಹಾಗಿತ್ತು. ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿಯ ನಾಯಕ ರಾಜಕಾರಣಿಯಾಗಿರಲಿ ರಕ್ಷಣಾ ಸಚಿವರಾಗಿರಲಿ ಅಥವಾ ದೇಶದ ಪ್ರಥಮ ಪ್ರಜೆಯಾಗಿರಲಿ ಅವರು ಏಕ ರೀತಿಯ ವ್ಯಕ್ತಿತ್ವವನ್ನು ಜೀವನವನ್ನು ರೂಪಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಅಧಿಕಾರ ಮತ್ತು ಕೀರ್ತಿ ಎಂದೂ ಭ್ರಷ್ಟರನ್ನಾಗಿಸಲಿಲ್ಲ.
ಪ್ರಣಬ್‍ದಾ ಅವರನ್ನು ನಾನು ಸಾಮಾನ್ಯವಾಗಿ 15 ನಿಮಿಷಗಳ ಕಾಲ ಮಿತಿಯಲ್ಲಿ ಭೇಟಿ ಮಾಡಬೇಕಾಗಿತ್ತು. ಆದರೆ ನಮ್ಮಿಬ್ಬರ ಸಂಭಾಷಣೆ ಆರೋಗ್ಯ, ಶಿಕ್ಷಣ ಮತ್ತು ಜೀವನ ಕುರಿತು ಮುಂದುವರಿಯುತ್ತಿತ್ತಲ್ಲದೇ ಅವರಿಗೆ ಅತ್ಯಂತ ಪ್ರಿಯರಾಗಿದ್ದ ಮಹರ್ಷಿ ಅರವಿಂದರ ಬಗ್ಗೆ ಕೂಡ ಮಾತನಾಡಿ ಗಂಟೆಗಳು ಉರುಳುತ್ತಿದ್ದವು. ಇದು ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳಲ್ಲಿ ಒಂದು.
ಒಂದು ಬಾರಿ ನಾನು ನನ್ನ ಪತ್ನಿ ಮತ್ತು ಮಗನೊಂದಿಗೆ ಅವರನ್ನು ಭೇಟಿ ಆಗಿದ್ದ ಸಂದರ್ಭದಲ್ಲಿ ನನ್ನ ಲೇಖನಗಳ ಸಂಗ್ರಹವನ್ನು ಅವರಿಗೆ ನೀಡಿದಾಗ ಹಸನ್ಮುಖರಾಗಿ ಸ್ವೀಕರಿಸಿದ್ದನ್ನು ನಾನು ಮರೆಯಲಾರೆ. ರಾಷ್ಟ್ರಪತಿ ಮಾತ್ರವಲ್ಲದೇ, ಓರ್ವ ಅಪ್ರತಿಮ ವಿದ್ವಾಂಸ, ರಾಜನೀತಿಜ್ಞ ಮತ್ತು ಸಂಭಾವಿತ ಸಜ್ಜನ ವಿಧೇಯ ವ್ಯಕ್ತಿಯೊಂದಿಗೆ ಪಡೆದ ಅನುಭವಗಳಿಂದ ಪ್ರಭಾವಿತನಾದ ನಾನು ಕೂಡ ಧರ್ಮ ನಿಷ್ಠನಾಗಿ, ಸ್ವಾರ್ಥರಹಿತವಾಗಿ ನನ್ನ ಕ್ಷೇತ್ರದಲ್ಲಿ ಮುಂದುವರೆಯಲು ಕೈಮರವಾಯಿತು ಎಂಬುದನ್ನು ಸದಾ ಸ್ಮರಿಸುತ್ತೇನೆ.
ಅವರಿಗೆ ಕೋವಿಡ್ ಪಾಸಿಟಿವ್ ಮತ್ತು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿದಾಗ ದುಃಖಿತನಾದೆ. ದೆಹಲಿಯ ಸೇನಾ ಆರ್‍ಆರ್ ಆಸ್ಪತ್ರೆಯಲ್ಲಿ ಅವರ ಪತ್ನಿ ಸುವ್ರಾರನ್ನು ಶ್ವಾಸಕೋಶ ಸಂಬಂಧಿ ತೊಂದರೆಗಳಿಗಾಗಿ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಂಡೆ. ದೇಶದ ಅಸಂಖ್ಯಾತ ಮಂದಿ ಭಾರತ ರತ್ನ ಎನಿಸಿದ, ಭಾರತದ ಅಗ್ರಗಣ್ಯ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸಿದವರ ಪೈಕಿ ನಾನೂ ಒಬ್ಬನಾಗಿದ್ದೆ. ಆದg, ಅವರ ಆರೋಗ್ಯ ಪರಿಸ್ಥಿತಿಯ ಗಂಭೀರತೆಯ ಅರಿವಿತ್ತು. ಕೊನೆಗೂ ಅವರು ಕಾಲನತೆಕ್ಕೆಯಲ್ಲಿ ಲೀನವಾದರು.
ವಿಧಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ಪ್ರಧಾನ ಮಂತ್ರಿ ಸ್ಥಾನವನ್ನು ಕಸಿದಿರಬಹುದು. ಆದರೆ, ಪ್ರಣಬ್ ದಾ ರಾಷ್ಟ್ರಪತಿಗಳಾಗಿ, ಭಾರತ ರತ್ನ ಕೂಡ ಆಗಿದ್ದು, ವಿಧಿ ಲಿಖಿತ. ಇದೀಗ ಅವರ ನಿಧನದಿಂದ ಒಂದು ರೀತಿಯ ಶೂನ್ಯತಭಾವ ಸೃಷ್ಟಿಯಾಗಿದ್ದರೂ ಸಹ, ಅವರ ವ್ಯಕ್ತಿತ್ವ, ಜೀವನ ಸಾಧನೆಗಳು ಬಹು ಕಾಲದವರೆಗೆ ನಮ್ಮನ್ನು ಮತ್ತು ಮುಂದಿನ ಪೀಳಿಗೆಯವರನ್ನು ಪ್ರಭಾವಿಸಬಲ್ಲವು ಎಂದು ನಾನು ನಂಬಿದ್ದೇನೆ. ಪ್ರಣಬ್ ದಾ ‘ಅಳಿದ ಮೇಲೆ’ ಉಳಿದವರ ಪೈಕಿ ಒಬ್ಬರಾಗಿದ್ದು, ಅವರ ಜೀವನ-ಸಾಧನೆ ನಮಗೆಲ್ಲರಿಗೂ ದಾರಿ ದೀಪವಾಗಿರಲಿ.
ಗೌರವನ್ವಿತ ಪ್ರಣಬ್ ಮುಖರ್ಜಿ ಅವರು ನನ್ನ ಬದುಕಿನಲ್ಲಿ ಗೌರವಾದರ್ಶಗಳ, ಅನುಸರಣೀಯ ವ್ಯಕ್ತಿತ್ವಗಳಲ್ಲಿ ಪ್ರಮುಖರು ಎಂಬುದು ನನ್ನ ಪಾಲಿ ಸೌಭಾಗ್ಯಗಳಲ್ಲಿ ಒಂದು.