ಪೊಲೀಸರಿಗೆ ಗೊತ್ತಿಲ್ಲದೆ ದಂಧೆ ನಡೆಯಲ್ಲ

03/09/2020

ಮೈಸೂರು ಸೆ.2 : ಪೊಲೀಸರಿಗೆ ಗೊತ್ತಿಲ್ಲದೆ ಡ್ರಗ್ಸ್ ಹಾಗೂ ಕಳ್ಳತನ ದಂಧೆಗಳು ನಡೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಇದು ನಿನ್ನೆ ಮೊನ್ನೆಯ ಪ್ರಕರಣ ಅಲ್ಲ ಇದು, ನಮಗೆ ಅರಿವು ಇಲ್ಲದೆ ಡ್ರಗ್ಸನ್ನು ನಾವೇ ಬೆಳೆಸಿಕೊಂಡು ಬಂದಿದ್ದೇವೆ. ಹಲವು ಹಂತದಲ್ಲಿ ಬೆಳೆದು ಸೆಲೆಬ್ರಿಟಿಗಳ ಹಂತಕ್ಕೆ ಬಂದು ನಿಂತಿದೆ. ಪೆÇಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಚಿತ್ರ ನಿರ್ದೇಶಕ ಮಾಡಿದ್ದಾನೆ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರ್ತಿದೆ. ಯಾವುದೇ ಸರ್ಕಾರವನ್ನ ಬೊಟ್ಟು ಮಾಡಬಾರದು ಎಂದರು. ಕೋವಿಡ್ ಹೇಗೆ ಜಗತ್ತಿಗೆ ಆವರಿಸಿದೆ ಅದೇ ರೀತಿ ಡ್ರಗ್ಸ್ ಕೂಡ ಗೊತ್ತಿಲ್ಲದಂತೆ ರಾಜ್ಯವನ್ನು ಆವರಿಸಿದೆ. ಯುವಕ, ಯುವತಿಯರು ತಮಗೆ ಅರಿವಿಲ್ಲದೆ ಈ ಪಾಪ ಕೂಪಕ್ಕೆ ಬಲಿಯಾಗುತ್ತಿದ್ದಾರೆ ಎಂದರು.