ಸ್ಯಾಂಡಲ್‍ವುಡ್ ಪ್ರಮುಖರ ಮಹತ್ವದ ಸಭೆ

03/09/2020

ಬೆಂಗಳೂರು ಸೆ. 3 : ಸ್ಯಾಂಡಲ್‍ವುಡ್‍ನಲ್ಲಿ ಕೆಲವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅನೇಕ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಕುರಿತಂತೆ ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಂದನವನದ ಪ್ರಮುಖರು ಬುಧವಾರ ಸಭೆ ಸೇರಿದ್ದರು.
ಈ ವೇಳೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ ‘ನಾವು ಚಿತ್ರರಂಗಕ್ಕೆ ಬಂದಾಗ ಇಂಥದ್ದನ್ನೆಲ್ಲ ಕಂಡಿಲ್ಲ. ಯಾಕೆಂದರೆ ನಮ್ಮ ತಲೆ ಮೇಲೆ ಜವಾಬ್ದಾರಿ ಜಾಸ್ತಿ ಇತ್ತು. ಇದ್ದ ಸರ್ಕಾರಿ ನೌಕರಿಗಳನ್ನು ಬಿಟ್ಟು, ಕಲೆಯನ್ನು ನಂಬಿಕೊಂಡು ಇಲ್ಲಿಗೆ ಬಂದಿದ್ವಿ. ನಮಗೆ ಬೇರೇನೂ ಅಲ್ಲ, ಎರಡು ಹೊತ್ತಿನ ಅನ್ನ ಸಿಕ್ಕಿದ್ದರೆ ಸಾಕಿತ್ತು. ಇದನ್ನು ಒಂದು ಗುರುಕುಲದಂತೆ ನೋಡಿದವರು ನಾವು. ನಮಗೆ ಡ್ರಗ್ಸ್ ಬಗ್ಗೆ ದೇವರಾಣೆ ಗೊತ್ತಿರಲಿಲ್ಲ’ ಎಂದಿದ್ದಾರೆ ದೊಡ್ಡಣ್ಣ.
‘ನನಗೆ ಎರಡು ವಿಷಯಕ್ಕೆ ತುಂಬ ನೋವಾಗಿದೆ. ಈ ಪ್ರಕರಣದಲ್ಲಿ ಸತ್ತವರ ವಿಷಯ ತೆಗೆದುಕೊಂಡಿದ್ದು ನನಗೆ ಬಹಳ ನೋವುಂಟುಮಾಡಿದೆ. ಯಾಕೆಂದರೆ ನಾವು ಕೂಡ ಹೆಣ್ಣುಮಕ್ಕಳನ್ನು ಹೆತ್ತಿದ್ದೇವೆ. ಆ ಮಗು ಎಷ್ಟು ಸಹಿಸಿಕೊಳ್ಳಬೇಕು? ಸ್ವಲ್ಪ ಆಳವಾಗಿ ಯೋಚನೆ ಮಾಡಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.