ಸಿಆರ್‌ಪಿಎಫ್ ಎಎಸ್‍ಐ ಆತ್ಮಹತ್ಯೆಗೆ ಶರಣು

September 3, 2020

ಭದೆರ್ವಾಹ್ ಸೆ.3 : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆಯ (ಸಿಆರ್‍ಪಿಎಫ್) ಸಹಾಯಕ ಸಬ್ ಇನ್ಸ್‍ಪೆಕ್ಟರ್(ಎಎಸ್‍ಐ)ರೊಬ್ಬರು ತಮ್ಮ ಸರ್ವಿಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
33 ನೇ ಬೆಟಾಲಿಯನ್ನ ಎಎಸ್ ಐ ಅಮೃತ್ ಭರದ್ವಾಜ್ (52) ಅವರು ರಾತ್ರಿ ಪಾಳಿ ಕರ್ತವ್ಯದ ನಂತರ ಕೋಟ್ಲಿಯ ಪೊಲೀಸ್ ಸಂಕೀರ್ಣದ ತಮ್ಮ ಬ್ಯಾರಕ್‍ಗೆ ಮರಳಿದ ಕೂಡಲೇ ಶೂಟ್ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಇಂದು ಬೆಳಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ ಮತ್ತು ಎಎಸ್‍ಐ ಅನ್ನು ತಕ್ಷಣವೇ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಎಎಸ್ ಐ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು” ಎಂದು ಭದೆರ್ವಾ ಪೊಲೀಸ್ವರಿಷ್ಠಾಧಿಕಾರಿ ರಾಜ್ ಸಿಂಗ್ ಗೌರಿಯಾ ಹೇಳಿದ್ದಾರೆ.

error: Content is protected !!