ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಯಿಂದ ಲೇಖನಗಳ ಆಹ್ವಾನ

03/09/2020

ಮಡಿಕೇರಿ ಸೆ. 3 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಗಳಾದ ಐಚೆಟ್ಟೀರ ಮಾ. ಮುತ್ತಣ್ಣ ಹಾಗೂ ಬಾಚಮಾಡ ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಎರಡು ಪ್ರತ್ಯೇಕ ಸ್ಮರಣ ಸಂಚಿಕೆಗಳನ್ನು ಹೊರತರಲು ನಿರ್ಧರಿಸಲಾಗಿದೆ. ಆಸಕ್ತ ಲೇಖಕರು ಈ ಸಾಹಿತಿಗಳ ಬದುಕು/ ವ್ಯಕ್ತಿತ್ವ/ ಸಾಹಿತ್ಯ/ ಸಾಹಿತ್ಯ ವಿಮರ್ಶೆ/ ಜೀವನ ಚರಿತ್ರೆ ಹಾಗೂ ಸಂಬಂಧಿತ ಇತರ ವಿಚಾರಗಳ ಬಗ್ಗೆ ಪ್ರತ್ಯೇಕ ಲೇಖನಗಳನ್ನು ಬರೆಯಬಹುದು. ಅಲ್ಲದೆ ಇವರಿಗೆ ಸಂಬಂಧಿಸಿದ ಛಾಯಾಚಿತ್ರಗಳು ಇದ್ದಲ್ಲಿ ಕಳುಹಿಸಿಕೊಡಬಹುದು. ಬರಹಗಳು ಕೊಡವ / ಕನ್ನಡ/ ಆಂಗ್ಲ ಭಾμÉಯಲ್ಲಿರಬಹುದು. ಆಯ್ದ ಬರಹ ಹಾಗೂ ಛಾಯಾಚಿತ್ರಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಲೇಖನಗಳನ್ನು ಇ ಮೇಲ್ ವಿಳಾಸ kodava.acadamy@gmail.com ಅಥವಾ ಕಚೇರಿ ವಿಳಾಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ 571201 ಗೆ ಅಂಚೆಯ ಮೂಲಕ ಅಕ್ಟೋಬರ್ 31 ರ ಒಳಗಾಗಿ ಕಳುಹಿಸಿಕೊಡುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

Close up of woman’s hands writing in spiral notepad placed on wooden desktop with various items