ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

03/09/2020

ಮಡಿಕೇರಿ ಸೆ. 3 : ಶ್ರೀ ನಾರಾಯಣಗುರುಧರ್ಮ ಪರಿಪಾಲನಾ (ಎಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ೧೬೬ನೇ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಸಿದ್ದಾಪುರದಲ್ಲಿ ಶ್ರೀ ನಾರಾಯಣಗುರು ಎಸ್‌ಎನ್ ಡಿ ಪಿ ಯೂನಿಯನ್ ಕಟ್ಟಡದ ಸಭಾಂಗಣದಲ್ಲಿ ಕಾಫಿ ಬೆಳೆಗಾರ ಕೆ.ಆರ್. ರಾಜನ್ ಧ್ವಜಾರೋಹಣ ನೆರವೇರಿಸಿದರು,
ಬೆಳೆಗಾರ ಕಂಬಿಬಾಣೆಯ ಟಿ.ಕೆ. ಸಾಯಿಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಸಂಘಟನೆಯ ಬಲವರ್ಧನೆಗಾಗಿ ಎಲ್ಲರೂ ಸಂಘಟಿತರಾಗಿ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.

ಎಸ್.ಎನ್.ಡಿ.ಪಿ. ಯೋಗಂಯೂನಿಯ?? ಜಿಲ್ಲಾಧ್ಯಕ್ಷ ವಿ.ಕೆ ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೋನಾ ವೈರಸ್ ನಿಂದ ಸಂಕ?ಕ್ಕೊಳಗಾಗಿರುವ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ನಾರಾಯಣಗುರುಜಯಂತಿಯನ್ನು ಸಾಮಾಜಿಕ ಅಂತರಕಾಯ್ದುಕೊಂಡು ಸರಳವಾಗಿ ಆಚರಣೆ ಮಾಡಲಾಗಿದೆ.
ಸಂಘಟನೆಯ ಬಲವರ್ಧನೆಗೆ ಬಾಂಧವರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಶಿವಮೊಗ್ಗ, ದಕ್ಷಿಣಕನ್ನಡ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ೫೦ಕ್ಕೊ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಸಾವಿರಾರು ಮಂದಿ ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲೂ ಸಂಘಟನೆ ವಿವಿಧ ಶಾಖೆಗಳಲ್ಲಿ ಸುಮಾರು ಹದಿನೆಂಟು ಸಾವಿರ ಮಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು. ಮುಂದಿನ ದಿನಗಳಲ್ಲಿ ಐವತ್ತು ಸಾವಿರ ಮಂದಿಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಮುಂದಾಗಿದೆ.
ಪ್ರತಿ ವ?ದಂತೆ ಈ ವ?ವೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೧೫ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಶ್ರೀ ನಾರಾಯಣ ಗುರುಗಳ ಶಾಖೆಗಳನ್ನು ಪ್ರಾರಂಭ ಮಾಡಲುಗುರಿ ಹೊಂದಿದ್ದು. ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೊ?ತ್ಸಹಿಸುವ ನಿಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಸಂಘಟನೆ ಮುಂದಾಗಿದೆ ಎಂದರು.
ಈ ಸಂದರ್ಭ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಘಟನೆಗಾಗಿ ಶ್ರಮಿಸಿದ ಯೂನಿಯ??ನ ಮಾಜಿ ಉಪಾಧ್ಯಕ್ಷ ಪಿ.ಕೆ. ಶ್ರೀಧರನ್, ಟಿ.ಆರ್. ಸೋಮನಾಥ್, ಪಿ.ಎನ್. ಸಹದೇವನ್, ನಿರ್ದೆಶಕರಾದಇ.ಎನ್. ಭರ??ಕುಮಾರ್, ಟಿ.ಕೆ. ಸೋಮನ್, ಪಿ.ಎನ್. ಸುಕುಮಾರ, ಹಿರಿಯರಾದ ಪಿ.ಎನ್. ವಿಜಯಕುಮಾರ್, ಮಾಲ್ದಾರೆಎಸ್.ಎನ್.ಡಿ.ಪಿ. ಶಾಖೆಯಅಧ್ಯಕ್ಷ ಕೆ.ಎ. ಕುಟ್ಟಪ್ಪನ್, ಸುಳುಗೋಡು ಶಾಖೆಯಅಧ್ಯಕ್ಷಎನ್. ಗೋಪಾಲನ್, ಗೋಣಿಕೊಪ್ಪ ಶಾಖೆಯಕೆ.ಜೆ. ಜಯೇಂದ್ರನ್‌ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .
ಲೇಖಕಿ ಕಾನತ್ತಿಲ್‌ರಾಣಿಅರುಣ್ ಬರೆದಿರುವ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರಯುಗ ಪುರು?, ಬ್ರಹ್ಮರ್ಷಿ ನಾರಾಯಣ ಗುರುಗಳ ಜೀವನ ಸಂದೇಶ ಎಂಬ “ಮಹಾಗುರು”ಪುಸ್ತಕವನ್ನುಗಣ್ಯರು ಲೋಕಾರ್ಪಣೆ ಮಾಡಿದರು.

ಯೂನಿಯ??ನ ಜಿಲ್ಲಾಉಪಾಧ್ಯಕ್ಷಆರ್.ರಾಜನ್ ,ಕಾರ್ಯದರ್ಶಿ ಎಂ.ಪಿ.ಶಿವಪ್ರಸಾದ್, ಪ್ರಮುಖರಾದರಾಜೇಂದ್ರ ಬಾಬು, ಪ್ರೇಮಾನಂದ,
ದಾಮೋದರ,ನಾರಾಯಣ’ ಸತೀಶ್,ರಾಜಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.