ಪುತ್ತರಿರ ಐನ್‌ಮನೆಯಲ್ಲಿ ಸಾಂಪ್ರದಾಯಿಕವಾಗಿ ನಡೆದ ಕೈಲ್ ಮುಹೂರ್ತ

03/09/2020

ಮಡಿಕೇರಿ ಸೆ. 3 : ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್‌ಮನೆಯಲ್ಲಿ ಗುರುವಾರ ಕೈಲ್‌ಪೊಲ್ದ್ ಹಬ್ಬದ ಆಚರಣೆಯನ್ನು ಸಾಂಪ್ರದಾಯ ಬದ್ದವಾಗಿ ಆಚರಿಸಲಾಯಿತು.
ಕುಟುಂಬದ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳೆಲ್ಲ ಐನ್‌ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆರ್ಶೀವಾದ ಪಡೆದರು.
ಕೊಡವರ ಸಾಂಪ್ರದಾಯಿಕ ಆಯುದ್ಧವಾದ ಕೋವಿ, ಒಡಿಕತ್ತಿ ಹಾಗೂ ಹಲವು ಕೃಷಿ ಚಟುವಟಿಕೆಯ ಆಯುಧ, ವಿಶೇಷ ಪಟ್ಟ ತೋಕ್‌ಪೂ, ವಿಶೇಷ ಭೋಜನವನ್ನಿಟ್ಟು ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್‌ಭೀಮಯ್ಯ ಸಾಂಪ್ರದಾಯಿಕ ಪೂಜೆಸಲ್ಲಿಸಿದರು.
ನಂತರ ಕುಟುಂಬದ ಹಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳು ಐನ್ನ್‌ಮನೆಯ ಅಂಗಳದಲ್ಲಿ ತೆಂಗಿಕಾಯಿಗೆ ಗುಂಡುಹೊಡೆಯುವ ಮೂಲಕ ಹಬ್ಬ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪುತ್ತರಿರ ಭೂಮಿಕ ಅಚ್ಚಯ್ಯ ಹಾಗೂ ಪುತ್ತರಿರ ರಿಶಾಂಕ್‌ನಂಜಪ್ಪಗೆ ಪುತ್ತರಿರ ಹರೀಶ್ ಅಯ್ಯಪ್ಪ ನೀಡಿರುವ ಬಹುಮಾನವನ್ನು ಕುಟುಂಬದ ಹಿರಿಯರಾದ ಪುತ್ತರಿರ ಭೀಮಯ್ಯ ಹಾಗೂ ಪುತ್ತರಿರ ಟುಟ್ಟು ಕಾರ್ಯಪ್ಪ ನೀಡಿ ಗೌರವಿಸಿದರು.
-ಕರುಣ್‌ಕಾಳಯ್ಯ