ಕೊಡಗಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ 1605ಕ್ಕೆ ಏರಿಕೆ : ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತ ಮಕ್ಕಳು ಪತ್ತೆ

03/09/2020

ಮಡಿಕೇರಿ ಸೆ. 3 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1605 ರಷ್ಟಾಗಿದ್ದು, ಈ ಪೈಕಿ 1226ಮಂದಿ ಗುಣಮುಖರಾಗಿದ್ದಾರೆ. 358 ಸಕ್ರಿಯ ಪ್ರಕರಣಗಳಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 248 ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 15 ಹಾಗೂ ಮಧ್ಯಾಹ್ನ 46 ಮಂದಿ ಸೇರಿದಂತೆ 61 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋವಿಡ್ ಸೋಂಕಿತ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಿಗೆ ಸೈನಿಕ ಶಾಲೆಯ 3 ವರ್ಷದ ಬಾಲಕಿ, ಗೋಣಿಕೊಪ್ಪ ಸೀಗೇತೋಡಿನ 10 ವರ್ಷದ ಬಾಲಕಿ, ಕುಶಾಲನಗರ ಕುಡ್ಲೂರುವಿನ 10 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕಿ, ಹೆಬ್ಬಾಲೆಯ ಕನಕ ಬಾಕ್‌ನ 17 ವರ್ಷದ ಬಾಲಕಿ, ಸುಂಟಿಕೊಪ್ಪ ಗುಂಡಿಗುಟ್ಟಿ ಪ್ರಾಥಮಿಕ ಶಾಲೆ ಬಳಿಯ 16 ವರ್ಷದ ಬಾಲಕಿ, ಚೆಟ್ಟಳ್ಳಿ ಶ್ರೀಮಂಗಲದ ಚೇರಳ ಮಸೀದಿ ಬಳಿಯ 11 ವರ್ಷದ ಬಾಲಕ, ವೀರಾಜಪೇಟೆ ಪಾಲಿಬೆಟ್ಟದ ಅತ್ತೂರು ನಲ್ಲಕೋಟೆ ಎಸ್ಟೇಟ್‌ನ 10 ವರ್ಷದ ಬಾಲಕಿಯಲ್ಲಿ ಸೋಂಕು ಇರುವುದು ದೃಢವಾಗಿದೆ.
ಗುರುವಾರ ಬೆಳಗ್ಗೆ ಮಡಿಕೇರಿ ಗಾಳೀಬೀಡುವಿನ ಕೆ.ನಿಡುಗಣೆಯ ಕೂಟುಹೊಳೆ ಬಳಿಯ 55 ವರ್ಷದ ಪುರುಷ, ವೀರಾಜಪೇಟೆ ತಿತಿಮತಿಯ ಸರ್ಕಾರಿ ಪ್ರೌಢಶಾಲೆ ಸಮೀಪದ 40 ವರ್ಷದ ಪುರುಷ, ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೇಕೇರಿ ಗೌರಿಶಂಕರ ದೇವಾಲಯ ಬಳಿಯ 29 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ ೩೨ ವರ್ಷದ ಇಬ್ಬರು ಪುರುಷರು, ಮಡಿಕೇರಿ ಹೊಸಬಡಾವಣೆ ಪ್ರಸನ್ನ ಗಣಪತಿ ದೇವಾಲಯ ಬಳಿಯ 40 ವರ್ಷದ ಮಹಿಳೆಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಮಡಿಕೇರಿ ಗೌಳಿಬೀದಿಯ ಪ್ರಸಾದ್ ಕ್ಲಿನಿಕ್ ಸಮೀಪದ 33 ವರ್ಷದ ಮಹಿಳೆ, ವೀರಾಜಪೇಟೆ ಪೊಲೀಸ್ ವಸತಿಗೃಹದ 34 ವರ್ಷದ ಪುರುಷ, ಮಡಿಕೇರಿ ಶಾಂತಿ ಚರ್ಚ್ ಎದುರಿನ 41 ವರ್ಷದ ಪುರುಷ, ಮಡಿಕೇರಿ ಬ್ರಾಹ್ಮಣರ ಬೀದಿಯ 39 ವರ್ಷದ ಪುರುಷ, ವೀರಾಜಪೇಟೆ ಬಾಳೆ ಕೋಣನಕಟ್ಟೆಯ 49 ವರ್ಷದ ಮಹಿಳೆ, ಕೂಡುಮಂಗಳೂರಿನ ಡೈರಿ ಬಳಿಯ 50 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಧ್ಯಾಹ್ನ ಎಮ್ಮೆಮಾಡು ಮಸೀದಿ ಬಳಿಯ 61 ವರ್ಷದ ಮಹಿಳೆ, ನಾಪೋಕ್ಲು ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಬಳಿಯ 55 ವರ್ಷದ ಪುರುಷ, ಕುಶಾಲನಗರ ಕಾವೇರಿ ಬಡಾವಣೆಯ 55 ವರ್ಷದ ಪುರುಷ, ಕುಶಾಲನಗರ ಮಾರ್ಕೆಟ್ ರಸ್ತೆಯ 3ನೇ ಬ್ಲಾಕ್‌ನ 35 ವರ್ಷದ ಮಹಿಳೆ, ಕುಶಾಲನಗರ ದಂಡಿಪೇಟೆ ಮಸೀದಿ ಬಳಿಯ 53 ಮತ್ತು 35 ವರ್ಷದ ಪುರುಷರು, ಕುಶಾಲನಗರ ಹೌಸಿಂಗ್ ಬೋರ್ಡ್‌ನ 56 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ಚೆಟ್ಟಳ್ಳಿ ಪೊನ್ನತ್‌ಮೊಟ್ಟೆಯ ೬೪ ವರ್ಷದ ಪುರುಷ, ಕುಶಾಲನಗರ ಹೆಬ್ಬಾಲೆಯ ಹುಲುಸೆ ಮುಖ್ಯ ರಸ್ತೆಯ ೫೨ ವರ್ಷದ ಪುರುಷ, ಸೋಮವಾರಪೇಟೆಯ ಕ್ಲಬ್ ರಸ್ತೆಯ ಕೊಡವ ಸಮಾಜ ಬಳಿಯ ೫೦ ವರ್ಷದ ಪುರುಷ, ಹೆಬ್ಬಾಲೆಯ ೩೮ ಮತ್ತು ೭೦ ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಕುಶಾಲನಗರ ಮಾದಾಪಟ್ಟಣ ಬಳಿಯ ೬೦ ವರ್ಷದ ಮಹಿಳೆ ಮತ್ತು ೫೭ ವರ್ಷದ ಪುರುಷ, ಆಲೂರು ಸಿದ್ದಾಪುರ ಭುವಂಗಾಲ ಗ್ರಾಮದ ೬೬ ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಮಾರಿಯಮ್ಮ ದೇವಾಲಯ ಬಳಿಯ ೨೬ ವರ್ಷದ ಮಹಿಳೆ, ಕುಶಾಲನಗರ ಸೈನಿಕ ಶಾಲೆ ವಸತಿಗೃಹದ ೨೩ ವರ್ಷದ ಮಹಿಳೆ, ಸೈನಿಕ ಶಾಲೆ ವಸತಿಗೃಹದ ೩೮ ಹಾಗೂ ೩೬ ವರ್ಷದ ಪುರುಷರಲ್ಲಿ ಸೋಂಕು ಗೋಚರಿಸಿದೆ.
ವೀರಾಜಪೇಟೆ ಗೋಣಿಕೊಪ್ಪದ ಸೀಗೆತೋಡುವಿನ ಆರ್.ಎಂ.ಸಿ ಬಳಿಯ ೩೭ ವರ್ಷದ ಮಹಿಳೆ, ವೀರಾಜಪೇಟೆ ಗೋಣಿಕೊಪ್ಪ ಅರವತ್ತೊಕ್ಲುವಿನ ಮೈಸೂರಮ್ಮ ಕಾಲೋನಿಯ ೨೯ ವರ್ಷದ ಪುರುಷ, ವೀರಾಜಪೇಟೆ ಹೆಗ್ಗಳ ಬೂದಿಮಾಳದ ೪೯ ವರ್ಷದ ಪುರುಷ, ಬೇಟೋಳಿ ರಾಮನಗರದ ೬೨ ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ಮೀನುಪೇಟೆಯ ಮಲಬಾರ್ ರಸ್ತೆಯ ೪೬ ವರ್ಷದ ಮಹಿಳೆ, ಮಡಿಕೇರಿ ಕಡಂಗದ ಅರಪಟ್ಟು ಗ್ರಾಮದ ೭೨ ವರ್ಷದ ಮಹಿಳೆ, ವೀರಾಜಪೇಟೆ ಎಫ್.ಎಂ.ಸಿ ರಸ್ತೆಯ ಸರಸ್ವತಿ ಸ್ಟೋರ್ಸ್ ಹಿಂಭಾಗದ ೫೩ ಮತ್ತು ೩೬ ವರ್ಷದ ಪುರುಷ, ಮಡಿಕೇರಿ ಬೊಯಿಕೇರಿಯ ಬಿ.ಎಸ್.ಎನ್.ಎಲ್ ಟವರ್ ಬಳಿಯ ೨೫, ೫೨, ೨೧, ೬೦ ವರ್ಷದ ಪುರುಷರು ಮತ್ತು ೫೬ ವರ್ಷದ ಮಹಿಳೆ, ಮಡಿಕೇರಿ ದಾಸವಾಳ ರಸ್ತೆಯ ೪೯ ವರ್ಷದ ಪುರುಷ, ಮಡಿಕೇರಿ ಪ್ರಕೃತಿ ಲೇಔಟ್‌ನ ೨೮ ವರ್ಷದ ಪುರುಷ ಮತ್ತು ೫೭ ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಗೋಚರಿಸಿದೆ.
ಕುಟ್ಟ ಪೊಲೀಸ್ ವಸತಿಗೃಹದ ೨೮ ವರ್ಷದ ಪುರುಷ, ಗೋಣಿಕೊಪ್ಪ ೨ನೇ ಬ್ಲಾಕ್‌ನ ೪೮ ವರ್ಷದ ಪುರುಷ, ವೀರಾಜಪೇಟೆ ಚರ್ಚ್ ರಸ್ತೆಯ ಕಾನ್ವೆಂಟ್ ಬಳಿಯ ೩೮ ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ ೪೫ ವರ್ಷದ ಪುರುಷ, ವೀರಾಜಪೇಟೆ ಸಿದ್ದಾಪುರ ಕೆನರಾ ಬ್ಯಾಂಕ್ ಎದುರಿನ ೨೮ ವರ್ಷದ ಪುರುಷ, ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ ೨೭ ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.