ನಿವೃತ್ತ ಉಪನ್ಯಾಸಕ ಕೆ.ಜಿ ಅಶ್ವಿನಿ ಕುಮಾರ್‌ಗೆ ಸನ್ಮಾನ

03/09/2020

ಮಡಿಕೇರಿ ಸೆ.3 : ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವತಿಯಿಂದ ಇತ್ತೀಚೆಗೆ ಸ್ವಯಂ ನಿವೃತ್ತರಾದ ಸಂಘದ ಗೌರವ ಅಧ್ಯಕ್ಷರಾದ ಕೆ.ಜಿ ಅಶ್ವಿನಿ ಕುಮಾರ್ ಇವರನ್ನು ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.
ಕೆ.ಜಿ ಅಶ್ವಿನಿ ಕುಮಾರ್ ಅವರ ಸ್ವಗ್ರಾಮವಾದ ನವಿಲೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡು ನಿವೃತ್ತ ಉಪನ್ಯಾಸಕರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಫಿಲಿಪ್ ವಾಸ್ ಮಾತನಾಡಿ ಅಶ್ವಿನಿ ಕುಮಾರ್ ಅವರು ೩೨ ವ?ಗಳ ಕಾಲ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ಪ್ರಾಮಾಣಿಕವಾಗಿ ಮತ್ತು ಅತ್ಯುತ್ತಮವಾದ ಬೋಧನೆ ಮಾಡಿ ಅಪಾರ ವಿದ್ಯಾರ್ಥಿ ಸಮೂಹ ಹೊಂದಿದ್ದಾರೆ ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ ಕೆ.ಜಿ ಅಶ್ವಿನಿ ಕುಮಾರ್ ಅವರು ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಅಪಾರವಾದ ಅನುಭವ ಪಡೆದಿದ್ದಾರೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಹಂಡ್ರಂಗಿ ನಾಗರಾಜ್, ಹೇಮಂತ್ ಕುಮಾರ್, ಸರ್ವೋತ್ತಮ ನಾಗಪ್ಪ, ರವಿಶಂಕರ್, ರುದ್ರಪ್ಪ, ಉಮೇಶ್, ನಾಗೇಶ್, ವಿವೇಕ್ ಇತರರು ಇದ್ದರು.