ಕುಶಾಲನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಕೈಲ್‌ಮುಹೂರ್ತ

03/09/2020

ಮಡಿಕೇರಿ ಸೆ. 3 : ಕೊಡಗಿನ ಸಾಂಪ್ರದಾಯಕ ಹಬ್ಬವಾದ ಕೈಲ್‌ಮುಹೂರ್ತ(ಆಯುದ ಪೂಜೆ)ಯನ್ನು ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕುಶಾಲನಗರ ಸಮೀಪದ ಬಸವನಹಳ್ಳಿ ಗ್ರಾಮದ ಮೇಲಟಂಡ ಚೆಂಗಪ್ಪ ಮತ್ತು ಮಂಜುಳ ದಂಪತಿ ಮನೆಯಲ್ಲಿ ಕೈಲು ಮುಹೂರ್ತ ಹಬ್ಬದ ಸಂದರ್ಭ ಆಯುಧಗಳಾದ ಕೋವಿ ಮತ್ತಿತರ ಕೃಷಿ ಚಟುವಟಿಕೆಗಳ ಆಯುಧಗಳನ್ನಿಟ್ಟು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.
ನಂತರ ಮಾಂಸದ ಖಾದ್ಯದೊಂದಿಗೆ ಸಹಾ ಬೋಜನವನ್ನು ಮಾಡಿ ಸಂಭ್ರಮಿಸಿದರು.
ಮಳೆ, ಚಳಿ ನಡುವೆ ಭತ್ತದ ಗದ್ದೆ ಕೆಲಸ ಮಾಡಿ ಆಯಾಸ ವಾಗಿದ್ದವರಿಗೆ ನಾನಾ ಭಕ್ಷಗಳನ್ನು ಸವಿದು ಕ್ರೆಡೆಗಳಲ್ಲಿ ಸ್ಪರ್ಧಿಸಿ ಕೌಶಲ್ಯ ಪ್ರದರ್ಶಿಸುವುದೂ ಈ ಹಬ್ಬದ ವಿಶೇಷ.