ಶತಾಯುಷಿ ಆಲೀರ ಚೇಕು ಹಾಜಿ ನಿಧನ

04/09/2020

ಪೊನ್ನಂಪೇಟೆ, ಸೆ.4: ಸಮೀಪದ ಬೇಗೂರು ಗ್ರಾಮದ ಶತಾಯುಷಿ ಆಲೀರ ಚೇಕು ಹಾಜಿ ಅವರು ನಿಧನರಾದರು. ಮಾಪಿಳೆತೋಡು ಕಲ್ಲಾಯಿ ಜುಮ್ಮಾ ಮಸೀದಿಯ ಹಿರಿಯ ತಕ್ಕ ಮುಖ್ಯಸ್ಥರಾಗಿದ್ದ ಇವರಿಗೆ 103 ವರ್ಷ ಪ್ರಾಯವಾಗಿತ್ತು.

ಮೃತರ ಅಂತ್ಯಕ್ರಿಯೆ ಮಾಪಿಳೆತೋಡು ಕಲ್ಲಾಯಿ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನಡೆಯಿತು. ಮೃತರು ನಾಲ್ವರು ಹೆಣ್ಣು ಮತ್ತು ನಾಲ್ವರು ಗಂಡು ಮಕ್ಕಳನ್ನು ಅಗಲಿದ್ದಾರೆ.