ಅಬ್ಬಿ ಜಲಪಾತ ಈಗ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ

04/09/2020

ಮಡಿಕೇರಿ ಸೆ. 4 : ಕೊವೀಡ್ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ನಿರ್ಬಂಧಿಸಲ್ಪಟ್ಟಿದ್ದ ಅಬ್ಬಿ ಜಲಪಾತವು ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ.

ಮಡಿಕೇರಿಯಿಂದ ಕೇವಲ 7-8  ಕಿ.ಮೀ ದೂರದಲ್ಲಿರುವ ಅಬ್ಬಿ ಜಲಪಾತವು ಕೊಡಗಿನಲ್ಲಿ ತುಂಬಾ ಪ್ರವಾಸಿಗರು ಭೇಟಿ ನೀಡುವ ಸ್ಥಳ. ಕಾಫಿ ತೋಟಗಳ ಮಧ್ಯೆ ಸಣ್ಣದಾಗಿ ಹರಿಯುವ ತೊರೆಯ ಅಬ್ಬಿ ಜಲಪಾತವು ನಮ್ಮನ್ನು ತನ್ನ ಭೋರ್ಗೆರೆವ ಶಬ್ದದಿಂದ ಮೂಕವಿಸ್ಮಿತರನ್ನಾಗಿಸುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಪ್ರವಾಸಿಗರಿಗೆ ನಿರ್ಭಂದಿಸಲ್ಪಟ್ಟಿದ್ದ ಅಬ್ಬಿ ಜಲಪಾತ ಈಗ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.