ಸೆ.5 ರಂದು ಮಡಿಕೇರಿ ದಸರಾ ದಶಮಂಟಪ ಸಮಿತಿ ಸಭೆ

September 4, 2020

ಮಡಿಕೇರಿ ಸೆ.4 : ಶ್ರೀದಂಡಿನ ಮಾರಿಯಮ್ಮ ದಶಮಂಟಪ ಸಮಿತಿ ವತಿಯಿಂದ ದಸರಾ ಆಚರಣೆಯ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲು ಮತ್ತು ಸಮಿತಿಯ ಅಧಿಕಾರ ಹಸ್ತಾಂತರ ಮಾಡಲು ಸೆ.5 ರಂದು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್ ತಿಳಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಸಭೆ ನಡೆಯಲಿದ್ದು, ನೂತನ ದಶಮಂಟಪ ಸಮಿತಿಯಾದ ಶ್ರೀಚೌಡೇಶ್ವರಿ ದೇವಾಲಯ ದಸರಾ ಸಮಿತಿಗೆ ದಸರಾ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರ ಹಸ್ತಾಂತರ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಪ್ರತಿ ದೇವಾಲಯದಿಂದ ಹಾಗೂ ಕರಗ ಸಮಿತಿಯಿಂದ ಇಬ್ಬರು ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹಾಜರಾಗುವವರು ಖಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕೆಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ : 87924 32414 ನ್ನು ಸಂಪರ್ಕಿಸಬಹುದಾಗಿದೆ.

error: Content is protected !!