ಸೋಮವಾರಪೇಟೆಯಲ್ಲಿ ಪತ್ರಿಕಾ ವಿತರಕ ಶಿವಣ್ಣ ಗೆ ಅಭಿನಂದನೆ

04/09/2020

ಮಡಿಕೇರಿ ಸೆ.4 : ಸೋಮವಾರಪೇಟೆಯಲ್ಲಿ ಕಳೆದ 33 ವರ್ಷಗಳಿಂದ ರಾಜ್ಯದ ಹಾಗೂ ಜಿಲ್ಲೆಯ ಎಲ್ಲಾ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸುತ್ತಿರುವ ಶಿವಣ್ಣ ಅವರನ್ನು ಪತ್ರಿಕಾ ವಿತರಕರ ದಿನದ ನೆನಪಿನಲ್ಲಿ ಸ್ಥಳೀಯ ಪತ್ರಕರ್ತರು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಿದರು. ಶಿವಣ್ಣ ಅವರ ಸೇವೆ ಸ್ಮರಣೀಯವಾಗಿದ್ದು, ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಪತ್ರಕರ್ತರಾದ ವಿಜಯ್ ಹಾನಗಲ್ಲು, ಲೋಕೇಶ್, ಮೃತ್ಯುಂಜಯ ಮತ್ತಿತರರು ಹಾಜರಿದ್ದರು.