ಆಯುರ್ವೇದ ಔಷಧದಲ್ಲಿ ಕರಿಬೇವಿನ ಎಲೆಗಳ ಉಪಯೋಗಗಳು

04/09/2020

ಭಾರತ ಮೂಲದ ರುಟೇಸಿಯೇ ಕುಟುಂಬದ ಉಷ್ಣವಲಯದಿಂದ ಉಪೋಷ್ಣ ವಲಯದಲ್ಲಿ ಬೆಳೆಯುವ ಮರವಾಗಿದೆ. ಹೆಸರನ್ನು ತಮಿಳಿನಲ್ಲಿ ‘ಕರಿವೇಪಿಳ್ಳೈ’ (ಕರಿ-ಮಸಾಲೆ ಪದಾರ್ಥ, ವೆಪ್ಪು-ಬೇವು ಮತ್ತು ಇಲೈ- ಎಲೆ) ಎಂದು ಉಚ್ಚರಿಸಲಾಗುತ್ತದೆ ಮತ್ತು ಇದು ಕರಿಬೇವಿನ ಎಲೆಗಳ ಅಕ್ಷರಶಃ ಭಾಷಾಂತರವಾಗಿದೆ. ತಮಿಳು ಹೆಸರಿನ ಅರ್ಥವು “ಮಸಾಲೆ ಪದಾರ್ಥವನ್ನು ತಯಾರಿಸಲು ಬಳಸುವ ಎಲೆ” ಎಂದು ಆಗಿದೆ ಮತ್ತು ಇದು ತಮಿಳುನಾಡಿನಲ್ಲಿ (ದಕ್ಷಿಣ ಭಾರತದ ಒಂದು ರಾಜ್ಯ) ತಯಾರಿಸುವ ಬಹುಪಾಲು ಎಲ್ಲಾ ಅಡುಗೆ ಪದಾರ್ಥಗಳಲ್ಲಿ ಕೊತ್ತುಂಬರಿ ಸೊಪ್ಪಿನ ಜೊತೆಗೆ ಬಳಸಲ್ಪಡುತ್ತದೆ. ಆಗಾಗ್ಗೆ ಮಸಾಲೆ ಪದಾರ್ಥಗಳಲ್ಲಿ ಬಳಸುವ ಎಲೆಗಳನ್ನು ಸಾಮಾನ್ಯವಾಗಿ “ಕರಿಬೇವಿನ ಎಲೆಗಳು” ಎನ್ನಲಾಗುತ್ತದೆ, ಆದರೆ ಇವುಗಳಿಗೆ “ಸಿಹಿ ಬೇವಿನ ಎಲೆಗಳು” ಎಂತಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದ್ದು, ಅಲ್ಲಿ ಕರಿಬೇವಿನ ಎಲೆಗಳಿಲ್ಲದೇ ಮಸಾಲೆ ಪದಾರ್ಥವು ರುಚಿಹೀನ ಎಂದು ಭಾವಿಸಲಾಗುತ್ತದೆ. ಎಲೆಯ ನೋಟವು ಕಹಿಯಾದ ಬೇವಿನ ಮರದ ಎಲೆಗಳ ಹಾಗೆ ಇರುವುದರಿಂದ ಕನ್ನಡದಲ್ಲಿ ಇದನ್ನು “ಕರಿ ಬೇವು” ಎಂದು ಕರೆಯಲಾಗುತ್ತದೆ. ಮೆಡಿಟರೇನಿಯನ್‌ನ ಸುವಾಸನೆಭರಿತ ಬೇ ಎಲೆಗಳು ಮತ್ತು ಕಾಮಕಸ್ತೂರಿ ಎಲೆಗಳಿಗಿಂತ ಕರಿಬೇವಿನ ಎಲೆಗಳು ಸಂಪೂರ್ಣವಾಗಿ ಭಿನ್ನವಾಗಿವೆ.

ಆಯುರ್ವೇದ ಔಷಧದಲ್ಲಿ :
ಮುರ್ರಾಯ ಕೋನಿಗೈ ಯ ಎಲೆಗಳನ್ನು ಆಯುರ್ವೇದಿಕ್ ಔಷಧದಲ್ಲಿಯೂ ಸಹ ಔಷಧೀಯ ವಸ್ತುವಾಗಿ ಬಳಸಲಾಗುತ್ತದೆ. ಈ ಎಲೆಗಳ ಗುಣಲಕ್ಷಣಗಳು ಸಕ್ಕರೆ ಕಾಯಿಲೆ ನಿರೋಧಕವಾಗಿ, ಆಂಟಿ ಆಕ್ಸಿಡೆಂಟ್ ಆಗಿ, ಸೂಕ್ಷ್ಮಾಣು ನಿರೋಧಕವಾಗಿ, ಊತ ನಿರೋಧಕವಾಗಿ, ಹೆಪಟೋಪ್ರೊಟೆಕ್ಟಿವ್ ಆಗಿ, ಆಂಟಿ-ಹೈಪರ್‌ಕೊಲೆಸ್ಟೆರೋಲೆಮಿಕ್ ಆಗಿ ಹಾಗೂ ಇತರ ರೋಗ ಲಕ್ಷಣಗಳಲ್ಲಿ ಉಪಯೋಗಕಾರಿಯಾಗಿದೆ. ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಇವುಗಳು ಕಬ್ಬಿಣದ ಅಂಶವನ್ನು ಸಹ ಒಳಗೊಂಡಿದೆ.

ಸಾಂಬಾರು ಪದಾರ್ಥಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವುದಾದರೂ, ಕರಿಬೇವಿನ ಮರದ ಎಲೆಗಳನ್ನು ರುಚಿಯನ್ನು ಹೆಚ್ಚಿಸಲು ಇತರ ಹಲವು ಆಹಾರ ಪದಾರ್ಥಗಳಲ್ಲಿ ಬಳಸಬಹುದು.

ಉಪಯೋಗಗಳು
ಆಗ ತಾನೇ ಕೊಯ್ದ ಎಲೆಗಳನ್ನು ಅಸವೀಕರಣಗೊಳಿಸಿ (ಆವಿ ಬಟ್ಟಿಯಿಳಿಸುವಿಕೆ) ಒಂದು ಬಗೆಯ ಚಂಚಲ ತೈಲವನ್ನು ತೆಗೆಯಬಹುದು. ಶುದ್ಧಗೊಳಿಸಿದ ಈ ಎಣ್ಣೆ ಹಳದಿ ಬಣ್ಣದ್ದೂ ಸಂಬಾರದ ವಾಸನೆಯುಳ್ಳದ್ದೂ ಲವಂಗದ ಕಟುರುಚಿಯುಳ್ಳದ್ದೂ ಅಗಿದೆ. ಇದನ್ನು ಕೆಲವು ಬಗೆಯ ಸಾಬೂನುಗಳಿಗೆ ಕೊಡುವ ಸುಗಂಧ ದ್ರವ್ಯಗಳನ್ನು ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಎಲೆಗಳನ್ನು ಆಮಶಂಕೆ. ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರೆಚು ಗಾಯಗಳಿಗೂ ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತಹರ ಔಷಧಿಗಳಾಗಿ ಉಪಯೋಗಿಸುತ್ತಾರೆ. ಇದರ ಚೌಬೀನೆ ಗಡುಸಾಗಿ ನಯವಾದ ಎಳೆಗಳ ವಿನ್ಯಾಸವನ್ನು ಹೊಂದಿದೆ. ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಇದನ್ನು ವ್ಯವಸಾಯದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಎಲೆಗಳನ್ನು ದಕ್ಷಿಣ ಮತ್ತು ಪಶ್ಚಿಮ ತೀರದ ಪ್ರದೇಶದ ಮತ್ತು ಶ್ರೀಲಂಕಾ ಅಡುಗೆಗಳಲ್ಲಿ ಮತ್ತು ಪ್ರಮುಖವಾಗಿ ಮಸಾಲೆ ಪದಾರ್ಥಗಳಲ್ಲಿ ಬೇ ಎಲೆಗಳಂತೆಯೇ ಪರಿಮಳದ ವಸ್ತುವಾಗಿ ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ತಯಾರಿಯ ಮೊದಲ ಹಂತದಲ್ಲಿ ಇದನ್ನು ಕತ್ತರಿಸಿದ ಈರುಳ್ಳಿಯ ಜೊತೆಗೆ ಹುರಿಯಲಾಗುತ್ತದೆ. ಕರಿಬೇವಿನ ಎಲೆಗಳನ್ನು ತೋರಣ್, ವಡಾ, ರಸಂ ಮತ್ತು ಕಢಿ ಪದಾರ್ಥಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ತಾಜಾ ರೂಪದಲ್ಲಿ ಇವುಗಳು ಅತೀ ಅಲ್ಪ ಬಾಳಿಕೆಯ ಕಾಲಾವಧಿಯನ್ನು ಹೊಂದಿರುತ್ತವೆ ಮತ್ತು ಇವುಗಳು ರೆಫ್ರಿಜರೇಟರ್‌ನಲ್ಲಿಯೂ ತಾಜಾವಾಗಿರಲಾರವು. ಇವುಗಳು ಒಣ ರೂಪದಲ್ಲಿಯೂ ಲಭ್ಯವಿರುತ್ತವೆ, ಆದರೆ ಸುವಾಸನೆಯು ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ.