ಎಚ್.ಕೆ.ನವೀನ್ ಕುಮಾರ್ ಗೆ ಪಿಎಚ್‍ಡಿ ಪದವಿ

04/09/2020

ಮಡಿಕೇರಿ ಸೆ. 4 : ಚಿಕ್ಕಮಗಳೂರಿನ ಯೂನಿಯನ್ ಬ್ಯಾಂಕಿನಲ್ಲಿ ಉಪ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಕೆ.ನವೀನ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‍ಡಿ ಪದವಿ ದೊರೆತಿದೆ.
ಡಾ.ಮಹೇಶ್ ಅವರ ಮಾರ್ಗದರ್ಶನದಲ್ಲಿ ಡಿವಿಡೆಂಡ್ ಪ್ರಾಕ್ಟಿಸಸ್ ಮತ್ತು ವ್ಯಾಲ್ಯೂ ಕ್ರಿಯೇಷನ್: ಎ ಸ್ಟಡಿ ಆಫ್ ಸೆಲೆಕ್ಟ್ ಸ್ಟಾಕ್ಸ್ ಲಿಸ್ಟೆಡ್ ಆನ್ ನ್ಯಾಷನಲ್ ಸ್ಟಾಕ್ ಎಕ್ಸೇಂಜ್ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ವ್ಯವಹಾರ ಆಡಳಿತ ವಿಷಯದಲ್ಲಿ ಪಿಎಚ್ ಡಿ ಪದವಿಗಾಗಿ 2010ರ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್‍ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಿದೆ.
ಎಚ್.ಕೆ.ನವೀನ್ ಕುಮಾರ್ ಅವರು ಕೊಡಗು ಜಿಲ್ಲೆಯ ಮಡಿಕೇರಿ ನಗರದವರಾಗಿದ್ದು, ಈ ಹಿಂದೆ ನಗರದ ಲೀಡ್ ಬ್ಯಾಂಕ್‍ನಲ್ಲಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.