ಸೆ.8 ರಂದು ಕೊಡಗಿಗೆ ಕೇಂದ್ರ ತಂಡ ಭೇಟಿ : ಮಳೆಹಾನಿ ಪ್ರದೇಶಗಳ ಪರಿಶೀಲನೆ

04/09/2020

ಮಡಿಕೇರಿ ಸೆ.4 : ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ತಂಡವು ಸೆ.8 ರಂದು ಭೇಟಿ ನೀಡಲಿದೆ.
ಕೇಂದ್ರ ತಂಡದಲ್ಲಿ ಕೆ.ವಿ.ಪ್ರತಾಪ್, ಡಾ.ಭರತೇಂದ್ ಕುಮಾರ್, ಡಾ.ಕೆ.ಮನೋಹರನ್, ಗುರುಪ್ರಸಾದ್ ಜೆ., ಎಸ್.ಸದಾನಂದ ಬಾಬು, ವಿ.ಪಿ.ರಾಜ್‍ವೇದಿ ಇವರು ತಂಡದಲ್ಲಿದ್ದಾರೆ. ತಲಕಾವೇರಿಯ ಗಜಗಿರಿ ಬೆಟ್ಟ ಭೂ ಕುಸಿತ ಪ್ರದೇಶ ಸೇರಿದಂತೆ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.