ಅಧಿಕಾರ ಸ್ವೀಕರಿಸಿದ ಮೂಡ ಅಧ್ಯಕ್ಷ ರಮೇಶ್ ಹೊಳ್ಳ
04/09/2020

ಮಡಿಕೇರಿ ಸೆ.4 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಎಸ್.ರಮೇಶ್ ಹೊಳ್ಳ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸುವುದಕ್ಕೂ ಮೊದಲು ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿ ವತಿಯಿಂದ ರಮೇಶ್ ಹೊಳ್ಳ ಅವರನ್ನು ಸನ್ಮಾನಿಸಿ ಶುಭ ಕೋರಲಾಯಿತು.
ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪುಲಿಯಂಡ ಜಗದೀಶ್, ಆರ್.ಎಂ.ಸಿ. ಅಧ್ಯಕ್ಷÀ ಬೆಪ್ಪುರನ ಮೇದಪ್ಪ, ಪ್ರಕಾಶ್ ಆಚಾರ್ಯ, ಮೂಡಾ ಆಯುಕ್ತ ಆರ್.ಶೇಷ ಇತರರು ಹಾಜರಿದ್ದರು.