ವಿರಾಜಪೇಟೆಯಲ್ಲಿ ಲಾಟರಿ ದಂಧೆಯಲ್ಲಿ ತೊಡಗಿದ್ದವರ ಬಂಧನ

04/09/2020

ಮಡಿಕೇರಿ : ಕೇರಳ ರಾಜ್ಯದ ಲಾಟರಿ ಟಿಕೆಟ್ ನ ಕೊನೆಯ ಮೂರು ಅಂಕಿಗೆ ಹಣವನ್ನು ಕಟ್ಟಿಸಿಕೊಂಡು ಜೂಜಾಟ ನಡೆಸುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ನೆಹರು ನಗರದ ನಿವಾಸಿ ಶಂಷುದ್ದೀನ್ ಹಾಗೂ ಗಾಂಧಿನಗರದ ನಿವಾಸಿ ರಶೀದ್ ಬಂಧಿತ ಆರೋಪಿಗಳು. ದಂಧೆಯಲ್ಲಿ ಭಾಗಿಯಾದ ಆರೋಪಿಗಳಿಂದ 5490 ರೂ. ನಗದು ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.