ಮಡಿಕೇರಿ ನಗರ ಪೊಲೀಸ್ ಠಾಣೆ ಸೀಲ್ ಡೌನ್ : 15 ಪೊಲೀಸರಿಗೆ ಕೋವಿಡ್ ಸೋಂಕು

04/09/2020

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ವ್ಯಾಪಿಸುತ್ತಲೇ ಇದ್ದು, ವೈರಸ್ ಹೆಚ್ಚಿನ ಸಂಖ್ಯೆ ಪೊಲೀಸರನ್ನು ಕಾಡಿದೆ. ಮಡಿಕೇರಿ ನಗರ ಪೊಲೀಸ್ ಠಾಣೆಯ 15 ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನಗರ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ ಎಂದು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ತಿಳಿಸಿದ್ದಾರೆ. ಸಾರ್ವಜನಿಕ ಕೆಲಸಗಳಿಗಾಗಿ ಗ್ರಾಮಾಂತರ ಠಾಣೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಠಾಣೆಯನ್ನು ಸ್ಯಾನಿಟೈಜ್ ಮಾಡಿದ ಬಳಿಕ ಎಂದಿನಂತೆ ತೆರೆಯಲಾಗುತ್ತದೆ.
ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 17 ಹಾಗೂ ಮಧ್ಯಾಹ್ನ 29 ಸೇರಿದಂತೆ 46 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1650ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸೋಂಕಿತರ ಪೈಕಿ 1244 ಮಂದಿ ಗುಣಮುಖರಾಗಿದ್ದು, 385 ಸಕ್ರಿಯ ಪ್ರಕರಣಗಳಿವೆ. 21 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 247ರಷ್ಟಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ಮಡಿಕೇರಿ ತಾಳತ್ತಮನೆಯ 28 ವರ್ಷದ ಪುರುಷ ಮತ್ತು 19 ವರ್ಷದ ಮಹಿಳೆ, ದಕ್ಷಿಣ ಕನ್ನಡದ ಕಲ್ಲುಗುಂಡಿಯ 60 ವರ್ಷದ ಮಹಿಳೆ, ವೀರಾಜಪೇಟೆ ಕುಂದ ಈಚೂರಿನ 62 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 36 ವರ್ಷದ ಮಹಿಳೆ ಮತ್ತು 7 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಾಲಿಬೆಟ್ಟದ ಮಸೀದಿ ಮುಖ್ಯ ರಸ್ತೆ ಬಳಿಯ 75 ವರ್ಷದ ಪುರುಷ, ವೀರಾಜಪೇಟೆ ಅರ್ಜಿಯ 24 ವರ್ಷದ ಮಹಿಳೆ, ಗಾಂಧಿನಗರ ಬಿ.ಎಸ್.ಎನ್.ಎಲ್ ಕಚೇರಿ ಬಳಿಯ 34 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 31 ವರ್ಷದ ಪುರುಷ, ಹಾಸನದ ಅರಕಲಗೂಡಿನ 40 ವರ್ಷದ ಪುರುಷ, ಮಡಿಕೇರಿ ಪೆನ್ ಷನ್ ಲೇಔಟ್‍ನ 59 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ 49 ವರ್ಷದ ಪುರುಷ, ಸಿದ್ದಾಪುರ ಪೊಲೀಸ್ ವಸತಿಗೃಹದ 47 ವರ್ಷದ ಪುರುಷ, ಹಾಸನದ ಅರಕಲಗೂಡುವಿನ 33 ವರ್ಷದ ಪುರುಷ, ವೀರಾಜಪೇಟೆ ಅರಪಟ್ಟು ಗ್ರಾಮದ 60 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಲೇಔಟ್‍ನ 67 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಶುಕ್ರವಾರ ಮಧ್ಯಾಹ್ನ ವೀರಾಜಪೇಟೆ ಮಾಯಮುಡಿಯ ಎಲ್ಲೋ ಬ್ಯಾಂಬು ರೆಸಾರ್ಟ್ ಎದುರಿನ 70 ವರ್ಷದ ಮಹಿಳೆ, ಕುಶಾಲನಗರ ಮಾದಾಪಟ್ಟಣದ ಅರಬ್ಬಿ ಶಾಲೆ ಬಳಿಯ 61 ವರ್ಷದ ಪುರುಷ, ಕುಶಾಲನಗರದ ಆದಿ ಶಂಕರಾಚಾರ್ಯ ಲೇಔಟ್‍ನ 40 ವರ್ಷದ ಮಹಿಳೆ, ತ್ಯಾಗತ್ತೂರಿನ ಭಗವತಿ ದೇವಾಲಯ ಬಳಿಯ 49, 45 ವರ್ಷದ ಪುರುಷರು ಮತ್ತು 20 ವರ್ಷದ ಮಹಿಳೆ, ಕುಶಾಲನಗರ ಶಿರಂಗಾಲದ ನಲ್ಲೂರುಕೊಪ್ಪಲಿನ 26 ವರ್ಷದ ಮಹಿಳೆ, ಹೆಬ್ಬಾಲೆಯ ಬಸವೇಶ್ವರ ದೇವಾಲಯ ಬಳಿಯ 46 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಕೊಡ್ಲಿಪೇಟೆ ಹೊನ್ನೆಕೋಡಿಯ 45 ಮತ್ತು 24 ವರ್ಷದ ಮಹಿಳೆಯರು, ವೀರಾಜಪೇಟೆ ಮಾಲ್ದಾರೆ ಗ್ರಾಮದ 53 ಮತ್ತು 47 ವರ್ಷದ ಪುರುಷರು, ಸಿದ್ದಾಪುರದ ಮಡಿಕೇರಿ ರಸ್ತೆಯ 19 ವರ್ಷದ ಪುರುಷ, ಕುಟ್ಟದ ಆಸ್ಪತ್ರೆ ವಸತಿಗೃಹದ 48 ವರ್ಷದ ಮಹಿಳೆ, ಕುಟ್ಟದ ಪೊಲೀಸ್ ವಸತಿಗೃಹದ 56 ವರ್ಷದ ಪುರುಷ, ಗೋಣಿಕೊಪ್ಪದ ಅರವತ್ತೊಕ್ಲುವಿನ 47 ವರ್ಷದ ಪುರುಷ, ಗೋಣಿಕೊಪ್ಪದ ಕಾರು ನಿಲ್ದಾಣದ ಹಿಂಭಾಗದ 38 ವರ್ಷದ ಮಹಿಳೆಯಲ್ಲಿ ಕೊರೋನಾ ಗೋಚರಿಸಿದೆ.
ವೀರಾಜಪೇಟೆ ಬೆಳ್ಳೂರು ಗ್ರಾಮದ ನೂರೆರದಾಳುವಿನ 71 ವರ್ಷದ ಪುರುಷ, ವೀರಾಜಪೇಟೆ ಶ್ರೀಮಂಗಲದ 26 ವರ್ಷದ ಮಹಿಳೆ, ವೀರಾಜಪೇಟೆ ವಿಜಯನಗರ 1ನೇ ಹಂತದ 62 ವರ್ಷದ ಮಹಿಳೆ, ಮೊಗರಗಲ್ಲಿಯ 5 ವರ್ಷದ ಬಾಲಕಿ ಮತ್ತು 45 ವರ್ಷದ ಮಹಿಳೆ, ವೀರಾಜಪೇಟೆ ಶ್ರೀಮಂಗಲ ಗ್ರಾಮದ ಶ್ರೀ ಕೃಷ್ಣ ದೇವಾಲಯ ಬಳಿಯ 77 ವರ್ಷದ ಮಹಿಳೆ, ಭಾಗಮಂಡಲ ಕೆವಿಜಿ ಕಾಲೇಜು ಬಳಿಯ 27 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚೆಟ್ಟಳ್ಳಿ ಕಂಡಕೆರೆಯ 20 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಪಿರಿಯಾಪಟ್ಟಣ ಬೈಲುಕುಪ್ಪೆಯ 37 ವರ್ಷದ ಪುರುಷ, ಸಿದ್ದಾಪುರ ಜಿಎಂಪಿ ಶಾಲೆ ಬಳಿಯ 60 ವರ್ಷದ ಪುರುಷ, ವೀರಾಜಪೇಟೆ ಕುಟ್ಟದ ಆಸ್ಪತ್ರೆ ವಸತಿಗೃಹದ 24 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 26 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿವರಿಸಿದ್ದಾರೆ.