ಜಿಎಸ್‍ಟಿ ದರ ಕಡಿತ ಸಾಧ್ಯತೆ
05/09/2020

ನವದೆಹಲಿ ಸೆ.5 : ವಾಹನಗಳ ಮೇಲಿನ ಜಿಎಸ್‍ಟಿ ದರ ಕಡಿತ ಮಾಡುವ ಸಾಧ್ಯತೆಯ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಸುಳಿವು ನೀಡಿದ್ದು, ವಾಹನ ಉದ್ಯಮಕ್ಕೆ ಶೀಘ್ರದಲ್ಲೇ “ಒಳ್ಳೆಯ ಸುದ್ದಿ” ಸಿಗಲಿದೆ ಎಂದು ಹೇಳಿದ್ದಾರೆ.
ಆಟೋ ಸ್ಕ್ರ್ಯಾಪೇಜ್ ನೀತಿ ಸಿದ್ಧವಾಗಿದೆ ಮತ್ತು ಈ ಸಂಬಂಧ ಎಲ್ಲಾ ಪಾಲುದಾರರು ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಜಾವಡೇಕರ್ ಅವರು ತಿಳಿಸಿದ್ದಾರೆ.
ವಾಹನಗಳ ಮೇಲಿನ ಜಿಎಸ್‍ಟಿ ದರ ಕಡಿತದ ಸಾಧ್ಯತೆಗಳ ಬಗ್ಗೆ ವಿವರಿಸಿದ ಅವರು, ದರ ಕಡಿತ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯವು ರೂಪಿಸುತ್ತಿದೆ ಮತ್ತು ನಾನು ಈಗಲೇ ಎಲ್ಲಾ ವಿವರ ನೀಡಲು ಸಾಧ್ಯವಿಲ್ಲ ಎಂದರು.
