ಚೀನಾದ ಯುದ್ಧ ವಿಮಾನ ಪತನ

05/09/2020

ತೈಪೆ ಸೆ.5 : ಜಗತ್ತಿನ ನಂಬರ್ ರಾಷ್ಟ್ರ ಆಗಲು ಹೊರಟಿರುವ ಚೀನಾ ತನ್ನ ನೆರೆಹೊರೆ ರಾಷ್ಟ್ರಗಳ ಮೇಲೆ ದಂಡೆತ್ತಿ ಬರುತ್ತಿದೆ. ಆದರೆ ತೈವಾನ್ ವಿಚಾರದಲ್ಲಿ ಮಾತ್ರ ಚೀನಾಗೆ ಭಾರೀ ಹಿನ್ನೆಡೆಯಾಗಿದ್ದು ಚೀನಾದ ಯುದ್ಧ ವಿಮಾನವೊಂದನ್ನು ತೈವಾನ್ ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.
ತೈವಾನ್ ನ ಕರಾವಳಿ ಪ್ರದೇಶದ ಗುವಾಂಗ್ಸಿ ಎಂಬಲ್ಲಿ ರಷ್ಯಾ ನಿರ್ಮಿತ ಸುಖೋಯ್ 35 ವಿಮಾನ ಪತನಗೊಂಡಿದೆ. ಈ ವಿಮಾನ ಯಾವ ಕಾರಣಕ್ಕೆ ಬಿದ್ದಿದೆ ಎಂಬುದಕ್ಕೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ವಾಯುಗಡಿ ಉಲ್ಲಂಘಿಸಿ ತನ್ನ ಭೂ ಪ್ರದೇಶದಲ್ಲಿ ಹಾರಾಟ ಮಾಡಿದ್ದಕ್ಕೆ ತೈವಾನ್ ನ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದೆ. ಸದ್ಯ ಯುದ್ಧ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಸದ್ಯ ಈ ಬಗ್ಗೆ ಎರಡು ರಾಷ್ಟ್ರಗಳು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ