ಈ ತಿಂಗಳಾಂತ್ಯಕ್ಕೆ ಸಿಬಿಎಸ್‍ಇ ಪರೀಕ್ಷೆ

September 5, 2020

ನವದೆಹಲಿ ಸೆ.5 : ಕೊರೋನಾ ಕಾರಣದಿಂದಾಗಿ ವಿಳಂಬವಾಗಿದ್ದ ಸಿಬಿಎಸ್‍ಇಯ 10-12 ನೇ ತರಗತಿಗಳ ವಿಭಾಗ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ನಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ಸಿಬಿಎಸ್‍ಇ ಸುಪ್ರೀಂ ಕೋರ್ಟ್ ಗೆ ಸೆ.04 ರಂದು ಮಾಹಿತಿ ನೀಡಿದ್ದು, ವಿಭಾಗ ಪರೀಕ್ಷೆಗಳನ್ನು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ನಡೆಸಲು ಉದ್ದೇಶಿಸಿರುವುದಾಗಿ ಹೇಳಿದೆ. ಇದೇ ವೇಳೆ ಸುಗಮ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಪರೀಕ್ಷಾ ಕೇಂದ್ರಗಳನ್ನು 1,278 ಕ್ಕೆ ಏರಿಕೆ ಮಾಡಿರುವುದಾಗಿ ಸಿಬಿಎಸ್‍ಇ ತಿಳಿಸಿದೆ.
ವಿಭಾಗ ಪರೀಕ್ಷೆ ನಡೆಸುವ ಸಿಬಿಎಸ್‍ಇಯ ನಿರ್ಧಾರದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ನ್ಯಾ. ಎ.ಎಂ ಖನ್ವಾಲಿಕರ್, ನ್ಯಾ. ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರಿದ್ದ ಪೀಠ ಪರಿಗಣಿಸಿದ್ದು ವಿಚಾರಣೆ ಕೈಗೆತ್ತಿಕೊಂಡಿದೆ.

error: Content is protected !!