ಮುದ್ರಾಡಿಗೆ ಪಾರ್ತಿಸುಬ್ಬ ಪ್ರಶಸ್ತಿ

05/09/2020

ಬೆಂಗಳೂರು ಸೆ.4 : ಹಿರಿಯ ಯಕ್ಷಗಾನ ಕವಿ, ಅರ್ಥಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಒಲಿದು ಬಂದಿದೆ.
2019ನೇ ಸಾಲಿನ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡಮಿ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು ಯಕ್ಷಗಾನದ ಬಗೆಗೆ ಹಲವಾರು ಕೃತಿಗಳನ್ನೂ ಪ್ರಕಟಿಸಿರುವ ಅಂಬಾತನಯ ಮುದ್ರಾಡಿಯವರನ್ನು ಪಾತ್ರಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ ವಿದ್ವಾಂಸರಾದ ಡಾ, ಚಂದ್ರಶೇಖರ್ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ಯಕ್ಷಗಾನ ಕಲಾವಿದರು ಮತ್ತು ವಿದ್ವಾಂಸ ಡಾ. ರಾಮಕೃಷ್ಣ ಗುಂದಿ, ಮೂಡಲಪಾಯ ಯಕ್ಷಗಾನ ಕಲಾವಿದ ಮತ್ತು ಸಂಘಟಕ ಕೆ.ಸಿ ನಾರಾಯಣ, ಮೂಡಲಪಾಯ ಯಕ್ಷಗಾನ ತಜ್ಞ ಡಾ. ಚಂದ್ರು ಕಾಳೇನಹಳ್ಳಿ ಅವರುಗಳುಗೆ ಗೌರವ ಪ್ರಶಸ್ತಿ ಲಭಿಸಿದೆ.