ಪಟಾಕಿ ಕಾರ್ಖಾನೆ ದುರಂತ : 7 ಸಾವು

05/09/2020

ಚೆನ್ನೈ ಸೆ.5 : ಪಟಾಕಿ ಕಾರ್ಖಾನೆಯಲ್ಲಿ ದುರಂತ ಮತ್ತೆ ಸಂಭವಿಸಿದೆ. ತಮಿಳು ನಾಡಿನ ಕದ್ದಲೂರು ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿ 7 ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಎಂ.ಶ್ರೀಅಭಿನವ್ ತಿಳಿಸಿದ್ದಾರೆ.
ರಾಜಧಾನಿ ಚೆನ್ನೈಯಿಂದ 190 ಕಿಲೋ ಮೀಟರ್ ದೂರದಲ್ಲಿ ಕದ್ದಲೂರು ಜಿಲ್ಲೆಯ ಕಟ್ಟುಮನ್ನರ್ಕೊಯ್ಲ್ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ತನಿಖಾ ತಂಡ ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ.