ಕೊಡಗಿನಲ್ಲಿ ಶನಿವಾರ 30 ಹೊಸ ಪ್ರಕರಣ ಪತ್ತೆ : ಸೋಂಕಿತರ ಸಂಖ್ಯೆ 1680ಕ್ಕೆ ಏರಿಕೆ

05/09/2020

ಮಡಿಕೇರಿ ಸೆ. 5 : ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 22 ಹಾಗೂ ಮಧ್ಯಾಹ್ನ 8 ಸೇರಿದಂತೆ ಹೊಸದಾಗಿ 30 ಮಂದಿಯಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1680ಕ್ಕೆ ಏರಿಕೆಯಾಗಿದೆ.

ವೀರಾಜಪೇಟೆ ಗಾಂಧಿನಗರದ ಕೃಷಿ ಕಚೇರಿ ಬಳಿಯ 42 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವೀರಾಜಪೇಟೆ ಪಂಜರಪೇಟೆಯ ಸರ್ವೋದಯ ಕಾಲೇಜು ಎದುರಿನ 37 ವರ್ಷದ ಮಹಿಳೆ, ಮಡಿಕೇರಿ ಬೊಯಿಕೇರಿಯ ಅಜ್ಜಪ್ಪ ದೇವಾಲಯ ಬಳಿಯ 55 ವರ್ಷದ ಪುರುಷ, ಮಕ್ಕಂದೂರಿನ ಕಾಪರ್ ಹಿಲ್ ಹೋಂಸ್ಟೇಯ 32 ಮತ್ತು 37 ವರ್ಷದ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಮವಾರಪೇಟೆ ಹೆಬ್ಬಾಲೆ ಮುಖ್ಯ ರಸ್ತೆಯ ಬಸ್ ನಿಲ್ದಾಣ ಬಳಿಯ 21 ವರ್ಷದ ಪುರುಷ, ಮಡಿಕೇರಿ ಮೇಕೇರಿಯ ಸಾಯಿ ಬಡಾವಣೆ ಬಳಿಯ 38 ವರ್ಷದ ಪುರುಷ, ಮಡಿಕೇರಿ ವೈವಾಸ್ ಆಸ್ಪತ್ರೆ ಬಳಿಯ 35 ವರ್ಷದ ಪುರುಷ, ಗೋಣಿಕೊಪ್ಪ 1ನೇ ಬ್ಲಾಕ್‍ನ ಕಾವೇರಿ ಕಾಲೇಜು ಹಾಸ್ಟೆಲ್ ಬಳಿಯ 45 ವರ್ಷದ ಮಹಿಳೆ, ಮಡಿಕೇರಿ ಪೊಲೀಸ್ ವಸತಿಗೃಹದ 37 ವರ್ಷದ ಪುರುಷ, ಮಡಿಕೇರಿ ಗದ್ದಿಗೆಯ ಮದರಸ ಬಳಿಯ 50 ವರ್ಷದ ಪುರುಷನಲ್ಲೂ ಸೋಂಕು ಗೋಚರಿಸಿದೆ.

ಮಡಿಕೇರಿ ಮಂಗಳಾದೇವಿ ನಗರದ 34 ವರ್ಷದ ಪುರುಷ, ಮಡಿಕೇರಿ ಬೊಯಿಕೇರಿಯ ಅಂಚೆ ಕಚೇರಿ ಸಮೀಪದ 42 ವರ್ಷದ ಪುರುಷ, 38 ವರ್ಷದ ಮಹಿಳೆ, 49, 69 ವರ್ಷದ ಪುರುಷರು ಮತ್ತು 65 ವರ್ಷದ ಮಹಿಳೆ. ಕಡಗದಾಳುವಿನ ಸರ್ಕಾರಿ ಶಾಲೆ ಬಳಿಯ 66 ವರ್ಷದ ಮಹಿಳೆ ಮತ್ತು 77 ವರ್ಷದ ಪುರುಷ, ಮಡಿಕೇರಿ ಅಶೋಕಪುರಂನ 40 ವರ್ಷದ ಪುರುಷ, ಶನಿವಾರಸಂತೆ ಮುಖ್ಯ ರಸ್ತೆಯ 52 ವರ್ಷದ ಮಹಿಳೆ, ಸೋಮವಾರಪೇಟೆ ಚೆಟ್ಟಳ್ಳಿಯ ಚೇರಳ ಶ್ರೀಮಂಗಲದ 59 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಶನಿವಾರ ಮಧ್ಯಾಹ್ನ ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಕೊಯನಾಡು ಬಳಿಯ 59 ವರ್ಷದ ಪುರುಷ, ಸೋಮವಾರಪೇಟೆ ಶಿರಂಗಾಲದ ನಾಕೂರು ಬಳಿಯ 27 ವರ್ಷದ ಮಹಿಳೆ ಮತ್ತು 31 ವರ್ಷದ ಪುರುಷ, ವೀರಾಜಪೇಟೆ ವಿದ್ಯಾನಗರದ ಬ್ರೈಟ್ ಶಾಲೆ ಬಳಿಯ 51 ವರ್ಷದ ಪುರುಷ, ಮಡಿಕೇರಿ ಶಾಂತಿನಿಕೇತನ ರಸ್ತೆಯ ಜಯನಗರದ 18ನೇ ಬಾಕ್‍ನ 56 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 36 ವರ್ಷದ ಪುರುಷ, ಮಡಿಕೇರಿ ಪುಟಾಣಿನಗರದ ಅಂಗನವಾಡಿ ಬಳಿಯ 33 ವರ್ಷದ ಮಹಿಳೆ, ಮಡಿಕೇರಿ ಈಸ್ಟ್ ಎಂಡ್ ಪೆಟ್ರೋಲ್ ಪಂಪ್ ಹಿಂಭಾಗದ 32 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1680ರಷ್ಟಾಗಿದ್ದು, ಈ ಪೈಕಿ 1283 ಮಂದಿ ಗುಣಮುಖರಾಗಿದ್ದಾರೆ. 376 ಸಕ್ರಿಯ ಪ್ರಕರಣಗಳಿದ್ದು, 21 ಮಂದಿ ಸಾವಿಗೀಡಾಗಿದ್ದಾರೆ. ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 258ರಷ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.