ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ಲಾಭ ಪಡೆಯಿರಿ : ಕೆಎಂಸಿ ಮನವಿ

05/09/2020

ಮಡಿಕೇರಿ ಸೆ.5 : ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕೆನ್ನುವ ಚಿಂತನೆಯಡಿ ಕೆಎಂಸಿ ಆಸ್ಪತ್ರೆಯಿಂದ ಆರಂಭಿಸಿದ್ದ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಎರಡು ದಶಕಗಳನ್ನು ಪೂರೈಸಿರುವ ಹಂತದಲ್ಲಿ, ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಒದಗಿಸುವ ದೃಷ್ಟಿಯಿಂದ ‘ಸ್ಮಾರ್ಟ್ ಕಾರ್ಡ್’ನ್ನು ಹೊರ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನಮೋಹನ್ ಡಿ.ಬಿ. ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಆರೋಗ್ಯ ಕಾರ್ಡ್‍ಗಳ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಕೊಡಗು ಜಿಲ್ಲಾ ವ್ಯಾಪ್ತಿಯ ಜನತೆ ಸ್ಮಾರ್ಟ್ ಕಾರ್ಡ್ ಹೊಂದಿಕೊಳ್ಳುವ ಮೂಲಕ ಕೆಎಂಸಿ ಸಮೂಹ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು. ಕಾರ್ಡ್‍ಗಳನ್ನು ಒಂದು ಅಥವಾ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಮಾಹಿತಿ ನೀಡಿದರು.
ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರು 1 ವರ್ಷಕ್ಕೆ ವೈಯಕ್ತಿಕವಾಗಿ 220 ರೂ. ನೀಡಿ ನವೀಕರಣ ಮಾಡಿಕೊಳ್ಳಬಹುದಾಗಿದ್ದು, ಕುಟುಂಬಕ್ಕೆ ಸಂಬಂಧಿಸಿದ್ದಾದರೆ 460 ರೂ. ಮತ್ತು ಕುಟುಂಬ ಪ್ಲಸ್ ಯೋಜನೆಯಾಗಿದ್ದರೆ 600 ರೂ. ನೀಡಿ ನವೀಕರಣ ಮಾಡಿಕೊಳ್ಳಬಹುದು. ನೂತನ ಕಾರ್ಡ್‍ನ್ನು ವೈಯಕ್ತಿಕ 1 ವರ್ಷಕ್ಕೆ 250 ರೂ., ಕುಟುಂಬವಾದಲ್ಲಿ 500 ರೂ. ಹಾಗೂ ಕುಟುಂಬ ಪ್ಲಸ್ ಆದಲ್ಲಿ 650 ರೂ. ನೀಡಿ ಪಡೆದುಕೊಳ್ಳಬಹುದು. ನೂತನ ಕಾರ್ಡ್ ವೈಯಕ್ತಿಕ 2 ವರ್ಷದ ಅವಧಿಯದ್ದನ್ನು 400 ರೂ., ಕುಟುಂಬ 700 ರೂ. ಮತ್ತು ಕುಟುಂಬ ಪ್ಲಸ್ ಆದಲ್ಲಿ 850 ರೂ. ನೀಡಿ ಪಡೆದುಕೊಳ್ಳಲು ಅವಕಾಶ ಒದಗಿಸಲಾಗಿದೆಯೆಂದು ಮಾಹಿತಿಯನ್ನಿತ್ತರು.
ಆರೋಗ್ಯ ಕಾರ್ಡ್ ಹೊಂದಿರುವವರು ಕೆಎಂಸಿ ಸಮೂಹ ಆಸ್ಪತ್ರೆಗಳಾದ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆ, ಕಟೀಲುವಿನ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ, ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆÉ ಪಡೆದಲ್ಲಿ ರಿಯಾಯ್ತಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಕಾರ್ಡ್‍ಗಳನ್ನು ಯಾರಿಂದ ಪಡೆಯಬಹುದು?- ಮಣಿಪಾಲ ಆರೋಗ್ಯ ಕಾರ್ಡ್‍ನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಮಡಿಕೆÉೀರಿಯಲ್ಲಿ ಪುಷ್ಪಲತಾ(ಆವಂದೂರು) ಮೊ.9731474598, ಪದ್ಮನಾಭ ಮೊ. 9880304306, ಸತೀಶ್ ಮೊ. 9880008988, ಅನಿತಾ(ಟೋಲ್‍ಗೇಟ್ ಮಡಿಕೇರಿ) ಮೊ. 9480306405, ವಿರಾಜಪೇಟೆಯಲ್ಲಿ ನಜೀರ್ ಅಹಮ್ಮದ್ ಮೊ.9141723578, ಮೂರ್ನಾಡಿನ ಅಮ್ಮ ಮೆಡಿಕಲ್ಸ್ ಮೊ.9611879779. ಇವರನ್ನು ಸಂಪರ್ಕಿಸಿ ಕಾರ್ಡ್‍ಗಳನ್ನು ಪಡೆಯಬಹುದೆಂದು ತಿಳಿಸಿದರು.
ಕಾರ್ಡ್‍ನಿಂದ ದೊರಕುವ ಉಪಯೋಗ- ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಾಲಿಟಿ ವೈದ್ಯರ ಹೊರ ರೋಗಿ ಸಮಾಲೋಚನೆ ಮೇಲೆ ಶೇ.50 ರ ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.20 ರ ರಿಯಾಯಿತಿ, ವಿಕಿರಣ ಪರೀಕ್ಷೆಗಳ ಮೇಲೆ ಶೇ.20 ರಿಯಾಯಿತಿ, ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ.10 ರ ರಿಯಾಯಿತಿ, ಹೊರ ರೋಗಿ ದಂತ ಚಿಕಿತ್ಸೆಗೆ ಶೇ.25 ರಿಯಾಯಿತಿ ದೊರಕುತ್ತದೆ. ಜನರಲ್ ವಾರ್ಡ್‍ನಲ್ಲಿ ಒಳರೋಗಿಯಾಗಿದ್ದಲ್ಲಿ ಕನ್ಸೂಮೇಬಲ್ಸ್ ಮತ್ತು ಪ್ಯಾಕೇಜ್‍ಗಳನ್ನು ಹೊರತು ಪಡಿಸಿ, ಬಿಲ್ಲಿನಲ್ಲಿ ಶೇ.20 ರಿಯಾಯಿತಿ ದೊರಕುತ್ತದೆ. ಹೆಚ್ಚಿನ ಮಾಹಿತಿಗಳಿಗಾಗಿ ಮಣಿಪಾಲ್ ಆರೋಗ್ಯಕಾರ್ಡ್ ವಿಭಾಗದ ದೂರವಾಣಿ ಸಂಖ್ಯೆ 7022078002 ಗೆ ಕರೆ ಮಾಡಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಸಂಯೋಜಕ ಉದಯ ಜೆ. ಹಾಗೂ ಪ್ರತಿನಿಧಿ ಪುಷ್ಪಲತಾ ಉಪಸ್ಥಿತರಿದ್ದರು.