ಪಾಲೆಮಾಡುವಿನಲ್ಲಿ ಶಿಕ್ಷಕರ ದಿನ ಆಚರಣೆ

05/09/2020

ಮಡಿಕೇರಿ ಸೆ. 5 : ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹೊದ್ದೂರು ಗ್ರಾ. ಪಂ. ವ್ಯಾಪ್ತಿಯ ಪಾಲೆಮಾಡಿನಲ್ಲಿ ಡಾ. ಅಂಬೇಡ್ಕರ್ ಯುವಕ ಸಂಘದದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಪಾಲೆಮಾಡಿದ ಸಾವಿತ್ರಿಬಾಯಿ ಫುಲೆ ಅಂಗನವಾಡಿಯಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೊಡುಗೆಯನ್ನು ನೀಡಿದ ಕಾಫೀ ಡೇ ಉದ್ಯಮಿ ವಿ.ಜಿ. ಸಿದ್ಧಾರ್ಥ್ ಅವರನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದಮಯಂತಿ, ಸಹ ಶಿಕ್ಷಕಿ ಸೌಮ್ಯ, ವೇಧಪ್ರಸಾದ್, ಶಾರದ, ರಹೀಶ್ ಯಮಾನಿ, ಹೊದ್ದೂರು ಗ್ರಾ. ಪಂಚಾಯಿತಿ ಉಪಾಧ್ಯರಾದ ಕುಸುಮಾವತಿ, ಹೋರಾಟಗಾರ ಆನಂದ್, ಕಾನ್ಸಿರಾಂಜೀ ನಗರ ಸ್ಥಾಪಕ ಅಧ್ಯಕ್ಷರು ಕೆ. ಮೊಣ್ಣಪ್ಪ ಹಾಗೂ ನಗರದ ನಿವಾಸಿಗಳು, ಡಾ. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಡಾ. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ಯೂನಿಸ್ ಸ್ವಾಗತಿಸಿ, ಸತೀಶ್ ವಂದಿಸಿದರು.