ಮರಗೆಣಸು ಕೃಷಿಯೊಂದಿಗೆ ಗಾಂಜಾ ಬೆಳೆ : ಕುಶಾಲನಗರದಲ್ಲಿ ಓರ್ವನ ಬಂಧನ

05/09/2020

ಮಡಿಕೇರಿ: ಗಾಂಜಾ ಬೆಳೆಸಿದ ಹಾಗೂ ಮಾರಾಟಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 8.400ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಮರಗೆಣಸು ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡವನ್ನು ಬೆಳೆದಿರುವುದಾಗಿ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು,ಅದೇ ಗ್ರಾಮದ ನಾಗಣ್ಣ(62)ಎಂಬವರನ್ನು ಬಂಧಿಸಿ, ಸುಮಾರು 7.5 ಅಡಿಯಷ್ಟು ಬೆಳೆದಿದ್ದ 6.400ಕೆ.ಜಿ. ತೂಕದ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.