ದೇವಾಲಯದ ರಥ ಬೆಂಕಿಗೆ ಆಹುತಿ
07/09/2020

ಅಮರಾವತಿ ಸೆ.7 : ಆಂಧ್ರಪ್ರದೇಶದ ಲಕ್ಷ್ಮೀ ನರಸಿಂಹ ದೇವಾಲಯ ರಥ ಬೆಂಕಿಗೆ ಆಹುತಿಯಾಗಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಅಂತರ್ವೇದಿಯ ಲಕ್ಷ್ಮಿನರಸಿಂಹ ದೇವಾಲಯವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಘಟನೆ ನಡೆದಿದ್ದು, ಅಗ್ನಿ ಆಕಸ್ಮಿಕದಲ್ಲಿ ಅದೃಷ್ಟವಶಾತ್ ಯಾವುದೇ ಸಂಭವಿಸಿಲ್ಲ.
ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಬೆಂಕಿ ಹೊತ್ತಿಕೊಳ್ಳುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
