ಅತಿಕ್ರಮಣವಾದ ಅರಣ್ಯ ಪ್ರದೇಶ ವಶಕ್ಕೆ
07/09/2020

ಬೆಂಗಳೂರು ಸೆ.7 : ಆನೇಕಲ್ ವಲಯದಲ್ಲಿ ಅತಿಕ್ರಮಣ ಮಾಡಿಕೊಂಡ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಇದುವರೆಗೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 120 ಎಕರೆ ಅತಿಕ್ರಮಿಸಿದ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು ಮೌಲ್ಯ ಸುಮಾರು 700ರಿಂದ 800 ಕೋಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಈ ಅರಣ್ಯ ಪ್ರದೇಶಗಳಿವೆ. ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡವರು ಕಳೆದ ವರ್ಷ ರಿಟ್ ಅರ್ಜಿ ಸಲ್ಲಿಸಿದ್ದು ತಿರಸ್ಕೃತಗೊಂಡ ನಂತರ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿದ ನಂತರ ಅರಣ್ಯ ಇಲಾಖೆ ಒತ್ತುವರಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ಹೊರಟಿತು. ಬೂತನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣಕಾರರು ಸುಮಾರು 180 ಎಕರೆ ಜಮೀನನ್ನು ವಶಪಡಿಸಿಕೊಂಡು ಅತಿಥಿ ಲೇ ಔಟ್ ನ್ನಾಗಿ ಮಾಡಿ ಸುಮಾರು 300 ಸೈಟ್ ಗಳನ್ನು ಮಾರಾಟ ಮಾಡಿದ್ದರು.
