ಅಶಿಸ್ತು ಕಂಡು ಅಸಮಾಧಾನಗೊಂಡ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ

September 7, 2020

ಮಡಿಕೇರಿ ಸೆ.7 : ಶಿಸ್ತಿಗೆ ಹೆಸರಾದ ಕೊಡಗಿನಲ್ಲೇ ಅಶಿಸ್ತು ಕಂಡು ಬಂದ ಹಿನ್ನೆಲೆ ನಿವೃತ್ತ ಏರ್‍ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ ಅವರು ಅಸಮಾಧಾನಗೊಂಡ ಪ್ರಸಂಗ ನಡೆಯಿತು.
ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಕೋವಿಡ್ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಹಲವು ಮಂದಿ ಸಭಿಕರು ಮಾಸ್ಕ್ ಧರಿಸದಿರುವುದನ್ನು ಕಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ವೀರ ಪರಂಪರೆಯ ಜೊತೆಗೆ ಶಿಸ್ತಿಗೆ ಹೆಸರಾದ ಜಿಲ್ಲೆ. ಆದರೆ ಕಾರ್ಯಕ್ರಮದಲ್ಲಿ ಸಾಕಷ್ಟು ಅಶಿಸ್ತು ಕಂಡು ಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಅನೇಕರು ಮಾಸ್ಕ್ ಧರಿಸದಿರುವ ಮೂಲಕ ಅಶಿಸ್ತು ಪ್ರದರ್ಶಿಸಿದ್ದಾರೆ. ಇದು ಸಲ್ಲದು ಎಂದು ಅವರು ಕಿವಿಮಾತು ಹೇಳಿದರು.
ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರು ವೀರಮರಣವನ್ನಪ್ಪಿದ 55 ವರ್ಷಗಳ ಬಳಿಕ ಅದರಲ್ಲೂ 8 ವರ್ಷಗಳ ಸತತ ಪ್ರಯತ್ನದ ನಂತರ ಅವರ ಪ್ರತಿಮೆ ಅನಾವರಣಗೊಂಡಿರುವುದು ಶ್ಲಾಘನೀಯ. ದೇಶಕ್ಕಾಗಿ ಬಲಿದಾನ ಗೈದವರು ಜಿಲ್ಲೆಯಲ್ಲಿ ಹಲವರಿದ್ದರೂ, ಮಹಾವೀರ ಚಕ್ರ ಪುರಸ್ಕøತರಾದವರು ದೇವಯ್ಯ ಹಾಗೂ ಪುಟ್ಟಿಚಂಡ ಎಸ್.ಗಣಪತಿ ಅವರು ಮಾತ್ರ ಎಂದು ಅವರು ಈ ಸಂದರ್ಭ ಸ್ಮರಿಸಿದರು.

error: Content is protected !!