ಕೊಡಗಿನಲ್ಲಿ ಸೋಂಕಿತ ಸಂಖ್ಯೆ 1741ಕ್ಕೆ ಏರಿಕೆ : 1391 ಮಂದಿ ಗುಣಮುಖ

September 7, 2020

ಮಡಿಕೇರಿ ಸೆ. 7 : ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 2 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 15 ಸೇರಿದಂತೆ ಒಟ್ಟು 17 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಮಡಿಕೇರಿ ಚೇರಂಬಾಣೆ ಕೊಳಗದಾಳುವಿನ 63 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಮಾದಾಪುರದ ಎಸ್.ಎಂ.ಸಿ.ಲೇಔಟಿನ ಜಂಬೂರು ಬಾಣೆಯ 62 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ಬಾಳೆಲೆಯ ಗಂಧದಗುಡಿ ಕಾಲೋನಿಯ 27 ವರ್ಷದ ಪುರುಷ. ವಿರಾಜಪೇಟೆ ಮಹಿಳಾ ಸಮಾಜ ಬಳಿಯ ರೋಟರಿ ಶಾಲೆ ಎದುರಿನ 59 ವರ್ಷದ ಪುರುಷ. ವಿರಾಜಪೇಟೆ ಚರ್ಚ್ ರಸ್ತೆಯ ಕಾನ್ವೆಂಟ್ ಬಳಿಯ 71 ವರ್ಷದ ಪುರುಷ. ವಿರಾಜಪೇಟೆ ಸಿದ್ದಾಪುರ ಗ್ರಾಮದ ಕೆನರಾ ಬ್ಯಾಂಕ್ ಎದುರಿನ 63 ವರ್ಷದ ಪುರುಷ. ವಿರಾಜಪೇಟೆ ಮಾಲ್ದಾರೆ ಅಂಚೆಯ ಗುಡ್ಲೂರು ಶಾಲೆ ಬಳಿಯ 33 ವರ್ಷದ ಪುರುಷ. ವಿರಾಜಪೇಟೆ ಪಿಡಬ್ಲ್ಯೂಡಿ ವಸತಿಗೃಹದ 28 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 48 ವರ್ಷದ ಪುರುಷ. ಪಾಲಿಬೆಟ್ಟ ಕಲ್ಲುಕೊರೆಯ ದುಬಾರೆಯ ಗಣಪತಿ ದೇವಾಲಯ ಬಳಿಯ 76 ವರ್ಷದ ಮಹಿಳೆ. ಪಾಲಿಬೆಟ್ಟ ಟಾಟಾ ಕಾಫೀ ಎಸ್ಟೇಟಿನ ಹೊಸಹಳ್ಳಿ ವಸತಿಗೃಹದ 30 ವರ್ಷದ ಪುರುಷ. ಕುಶಾಲನಗರ ಬಿಎಂ ರಸ್ತೆಯ ರೋಟರಿ ಕ್ಲಬ್ ಎದುರಿನ 73 ವರ್ಷದ ಪುರುಷ ಮತ್ತು 17 ವರ್ಷದ ಬಾಲಕಿ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಚಿಕ್ಕಮಂದೂರು ಗ್ರಾಮ ಮತ್ತು ಅಂಚೆಯ ಅಚ್ಚುನಾಯಕ ದೇವಾಲಯ ಬಳಿಯ 40 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ಚರ್ಚ್ ಸೈಡಿನ 11 ವರ್ಷದ ಬಾಲಕ. ಕುಶಾಲನಗರದ ಬಸವೇಶ್ವರ ಬಡಾವಣೆಯ ಜನತಾ ಕಾಲೋನಿಯ 19 ವರ್ಷದ ಪುರುಷ. ಸುಂಟಿಕೊಪ್ಪ ಕೂರ್ಗಳ್ಳಿ ಎಸ್ಟೇಟ್ ವಸತಿ ಗೃಹದ 53 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1741 ಆಗಿದ್ದು, 1391 ಮಂದಿ ಗುಣಮುಖರಾಗಿದ್ದಾರೆ. 327 ಸಕ್ರಿಯ ಪ್ರಕರಣಗಳಿದ್ದು, 23 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 286 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.