ಕೊಡವ ಸಾಹಿತ್ಯ ಅಕಾಡಮಿ ಕಥೆ, ಕವನ, ಪ್ರಬಂಧ ಸ್ಪರ್ಧಾ ವಿಜೇತರು

07/09/2020

ಮಡಿಕೇರಿ ಸೆ.7 : ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ಜುಲೈ 24 ರಂದು ಐಚೆಟ್ಟಿರ ಮಾ.ಮುತ್ತಣ್ಣ ಹಾಗೂ ಬಾಚಮಾಡ ಡಿ.ಗಣಪತಿ ಇವರ ಜನ್ಮ ಶತಮಾನೋತ್ಸವ ಪ್ರಯುಕ್ತ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ತೀರ್ಪುಗಾರರಾಗಿ ನಾಗೇಶ್ ಕಾಲೂರು ಮತ್ತು ಕಸ್ತೂರಿ ಗೋವಿಂದಮ್ಮಯ್ಯ ಅವರು ಕರ್ತವ್ಯ ನಿರ್ವಹಿಸಿದ್ದು ಬಹುಮಾನ ವಿಜೇತರ ಹೆಸರುಗಳು ಇಂತಿವೆ.
ಕಥೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗ್ರಂಥಾ ಕಾರ್ಯಪ್ಪ ಚೆಟ್ಟೀರ, ದ್ವಿತೀಯ ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ, ತೃತೀಯ ಆಂಡಮಾಡ ಚರಿತ್ರ ಪವನ್, ಕವನ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಚೇಮಿರ ದೇವಕ್ಕಿ ಭೀಮಯ್ಯ, ದ್ವಿತೀಯ ಬಾಚರಣಿಯಂಡ ರಾಣು ಅಪ್ಪಣ್ಣ, ತೃತೀಯ ಬೊಳ್ಳೆರ ಸುಮನ್ ಸೀತಮ್ಮ ಹಾಗೂ ಆಂಡಮಾಡ ಚರಿತ್ರ ಪವನ್, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಾಚರಣಿಯಂಡ ಪಿ.ಅಪ್ಪಣ್ಣ ಹಾಗೂ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯಪ್ಪ ಮತ್ತು ದ್ವಿತೀಯ ಬಹುಮಾನವನ್ನು ಮೊಣ್ಣಂಡ ಸೋಭಾ ಸುಬ್ಬಯ್ಯ ಹಾಗೂ ಮಾಳೆಯಂಡ ನೀಮಾ ಕಾರ್ಯಪ್ಪ ಇವರು ಪಡೆದುಕೊಂಡಿದ್ದಾರೆ ಎಂದು ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಡಾ.ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.